ನಾಡಪ್ರಭು ಕೆಂಪೇಗೌಡ ಜಯಂತಿ, ಸ್ಟಾರ್ ನಟರಿಂದ ಸಾಮಾಜಿಕ ಜಾಲ ತಾಣದಲ್ಲಿ ಶುಭಾಶಯ , ಚಿತ್ರವೊಂದನ್ನು ಪ್ರಕಟಿಸಿ ಶುಭಾಶಯ ಕೋರಿದ ದರ್ಶನ್

0
18

ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ನಾಡಿನೆಲ್ಲೆಡೆ ಸರಳವಾಗಿ ಆಚರಿಸಲಾಗಿದೆ. ಹಲವಾರು ರಾಜಕಾರಣಿಗಳು, ಸೆಲೆಬ್ರಿಟಿಗಳು ಕೆಂಪೇಗೌಡ ಜಯಂತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.ನಟ ದರ್ಶನ್ ಸಹ ಕೆಂಪೇಗೌಡರ ಜಯಂತಿಯ ದಿನದಂದು ಚಿತ್ರವೊಂದನ್ನು ಪ್ರಕಟಿಸಿ ಶುಭಾಶಯಗಳನ್ನು ಕೋರಿದ್ದಾರೆ, ಆದರೆ ಕೆಂಪೇಗೌಡರ ಚಿತ್ರದ ಬದಲಿಗೆ ವೀರ ಮದಕರಿ ನಾಯಕರ ಚಿತ್ರವನ್ನು ದರ್ಶನ್ ಬಳಸಿದ್ದಾರೆ.ಕೆಂಪೇಗೌಡರ ಹಾಗೂ ವೀರ ಮದಕರಿ ನಾಯಕರ ಚಿತ್ರಗಳು ಬಹುವಾಗಿ ಹೋಲುತ್ತವೆ ಎರಡರಲ್ಲೂ ತುಸುವಷ್ಟೆ ವ್ಯತ್ಯಾಸ ಆದರೆ ಈ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿರುವ ದರ್ಶನ್, ಕೆಂಪೇಗೌಡರ ಜಯಂತಿ ಶುಭಾಶಯ ಕೋರಲು ವೀರ ಮದಕರಿ ನಾಯಕರ ಚಿತ್ರವನ್ನು ಹಾಕಿದ್ದಾರೆ.ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ’ ಎಂದು ಕಾಳಜಿಯುಕ್ತ ಪೋಸ್ಟ್‌ ಅನ್ನೇ ದರ್ಶನ್ ಹಾಕಿದ್ದಾರೆ ಆದರೆ ಚಿತ್ರವನ್ನು ಹಾಕುವಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here