Tuesday, October 27, 2020
Tuesday, October 27, 2020

Latest Posts

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...

ನಾಡಹಬ್ಬ ದಸರಾ ಹಿನ್ನೆಲೆ: ಮೈಸೂರಿನಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ವಾಹನ ಸಂಚಾರ ಹೆಚ್ಚಾಗುವ ಹಿನ್ನೆಲೆ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ನಗರ ಪೊಲೀಸ್ ಆಯುಕ್ತರು ವಾಹನ ಸಂಚಾರದ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 17 ರಿಂದ 26 ರವರೆಗೆ ಪ್ರತಿ ದಿನ ಮಧ್ಯಾಹ್ನ 4 ಗಂಟೆಯಿoದ ರಾತ್ರಿ 9.30 ಗಂಟೆಯವರೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಅರಮನೆ ಸುತ್ತಲಿನ ರಸ್ತೆಗಳಲ್ಲಿ, ನ್ಯೂ ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತ, ನೆಹರು ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್ ವರೆಗೆ, ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿoದ ಬನುಮಯ್ಯ ಚೌಕದ ವರೆಗೆ ಹಾಗೂ ತ್ಯಾಗರಾಜ ರಸ್ತೆಯಲ್ಲಿ ಎನ್. ಮಾಧುರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ ಪ್ರತಿ ದಿನ ಮಧ್ಯಾಹ್ನ ೪ ಗಂಟೆಯಿoದ ರಾತ್ರಿ ೯.೩೦ ಗಂಟೆಯವರೆಗೆ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಸುತ್ತಲಿನ ರಸ್ತೆಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ – ಕುಸ್ತಿ ಅಖಾಡ ಜಂಕ್ಷನ್ – ಬಿ.ಎನ್.ರಸ್ತೆ – ಜಯಚಾಮರಾಜ ಒಡೆಯರ್ ವೃತ್ತ – ಆಲ್ಬರ್ಟ್ ವಿಕ್ಟರ್ ರಸ್ತೆ – ಚಾಮರಾಜ ಒಡೆಯರ್ ವೃತ್ತ – ಚಾಮರಾಜ ಒಡೆಯರ್ ವೃತ್ತ – ಅಲ್ಬರ್ಟ್ ವಿಕ್ಟರ್ ರಸ್ತೆ-ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆ-ಬಸವೇಶ್ವರ ವೃತ್ತ – ಚಾಮರಾಜ ಜೋಡಿ ರಸ್ತೆ – ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಈ ರಸ್ತೆಗಳಲ್ಲಿ ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಮಾತ್ರ ವಾಹನಗಳು ಸಂಚಿಸಲು ಅವಕಾಶ ವಿರುತ್ತದೆ.
ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ನಗರದ ಹಲವು ಕಡೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಕ್ಟೋಬರ್ ೧೭ ರಿಂದ ೨೬ ರವರೆಗೆ ಪ್ರತಿ ದಿನ ಮಧ್ಯಾಹ್ನ ೪ ಗಂಟೆಯಿoದ ರಾತ್ರಿ ೯.೩೦ ರವರೆಗೆ ಅಂಬಾವಿಲಾಸ ಅರಮನೆ ಸುತ್ತ ಮುತ್ತಲೂ ಅಂದ್ರೆ ಟೌನ್‌ಹಾಲ್, ದೊಡ್ಡಕರೆ ಮೈದಾನ, ವರಹಾದ್ವಾರದ ಸುತ್ತಲೂ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ.
ಸಯ್ಯಾಜಿರಾವ್ ರಸ್ತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂದರ ರಸ್ತೆಯಲ್ಲಿ ಬಿ.ರಾಚಯ್ಯ ವೃತ್ತದಿಂದ ಬಿ.ಎನ್ ರಸ್ತೆ ಜಂಕ್ಷನ್ ವರೆಗೆ, ಬಿ.ಎನ್ ರಸ್ತೆಯಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ, ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ.
ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಅರಮನೆಯ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿಸ್ಥಳ ಸೇರಿದಂತೆ, ಡಾ.ರಾಜ್‌ಕುಮಾರ್ ವೃತ್ತದಿಂದ ಟಿ.ಎನ್. ನರಸಿಂಹಮೂರ್ತಿ ವೃತ್ತದವರೆಗೆ, ವಸ್ತು ಪ್ರದರ್ಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿoದ ಶಾಲಿವಾಹನ ರಸ್ತೆ ಜಂಕ್ಷನ್‌ವರೆಗೆ, ಇಟ್ಟಿಗೆಗೂಡಿನ ಹೊಸ ಬೀದಿ ೫ನೇ ತಿರುವು ರಸ್ತೆಯಲ್ಲಿ ಶಾಲಿವಾಹನ ರಸ್ತೆ ಜಂಕ್ಷನ್‌ನಿoದ ವಸ್ತು ಪ್ರದರ್ಶನದ ಪೂರ್ವ ದ್ವಾರದವರೆಗೆ, ಮಾನಸರ ರಸ್ತೆಯಲ್ಲಿ ವಾಣಿವಿಲಾಸ ರಸ್ತೆ ಜಂಕ್ಷನ್‌ನಿAದ ಲೋಕರಂಜನ್‌ರಸ್ತೆ ಜಂಕ್ಷನ್ ವರೆಗೆ.
ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿoದ ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿoದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...

ಆರ್. ಆರ್. ನಗರ ಉಪಚುನಾವಣೆ: ಕುಸುಮಾ ಪರ ಸಿದ್ದರಾಮಯ್ಯ ಪ್ರಚಾರ

ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿನ ಆರ್.ಆರ್. ನಗರದ ಅಭ್ಯರ್ಥಿ ಕುಸುಮಾ ಅವರ ಪರ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾರೀ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆಯ ಪ್ರಚಾರದ...

Don't Miss

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...
error: Content is protected !!