ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಾಡಿನ ಸಮಸ್ತ ಜನತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ ಎಂದು ಹೇಳಿದ್ದಾರೆ.
ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ. pic.twitter.com/Yluw0ow1et
— B.S. Yediyurappa (@BSYBJP) December 31, 2020