Sunday, April 11, 2021

Latest Posts

ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಆರಂಭ ಎಂದ ರಜನಿಕಾಂತ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಜನಿಕಾಂತ್ 168ನೇ ಸಿನಿಮಾ ‘ಅಣ್ಣಾತೆ’ ಮತ್ತೆ ಚಿತ್ರೀಕರಣ ಆಗುತ್ತೆ , ಯಾವಾಗ ರಿಲೀಸ್ ಆಗುತ್ತೆ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್ ನ್ಯೂಸ್ ದೊರೆತಿದೆ.
ಕಳೆದ ವರ್ಷ ರಜನಿಕಾಂತ್​ಗೆ ಅನಾರೋಗ್ಯ ಕಾಡಿದ್ದರಿಂದ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಚೆನ್ನೈಗೆ ವಾಪಸಾಗಿದ್ದರು. ಈ ಕಾರಣದಿಂದ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಇದೀಗ ಮಾರ್ಚ್ 15 ರಿಂದ ಮತ್ತೆ ‘ಅಣ್ಣಾತೆ’ ಚಿತ್ರೀಕರಣವನ್ನು ಆರಂಭಿಸಲಾಗುವುದು ಎಂದು ಚಿತ್ರತಂಡ ಪ್ರಕಟಿಸಿದೆ.
ರಜನಿಕಾಂತ್ ಕೂಡಾ ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ಮೂಲಕ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಮತ್ತೆ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ಚಿತ್ರೀಕರಣ ಮತ್ತೆ ಹೈದರಾಬಾದ್​​ನಲ್ಲಿ ನಡೆಯಲಿದೆಯಾ ಅಥವಾ ಚೆನ್ನೈನಲ್ಲಿ ಮುಂದುವರೆಯಲಿದೆಯೇ ಎಂಬ ವಿಚಾರ ತಿಳಿದುಬಂದಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss