Tuesday, July 5, 2022

Latest Posts

ನಾನು ಯಾವುದೇ ದುರುದ್ದೇಶದಿಂದ ಕೆಂಪು ಕೋಟೆ ಬಳಿ ಹೋಗಲಿಲ್ಲ: ದೀಪ್​ ಸಿಧು ಪ್ರತಿಕ್ರಿಯೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾನು ಯಾವುದೇ ದುರುದ್ದೇಶದಿಂದ ಕೆಂಪು ಕೋಟೆ ಬಳಿ ಹೋಗಲಿಲ್ಲ. ಎಲ್ಲಾ ಪ್ರತಿಭಟನಾಕಾರರು ತೆರಳುತ್ತಿದ್ದ ಕಾರಣ ನಾನು ಅವರೊಂದಿಗೆ ಹೋದೆ ಅಷ್ಟೇ ಎಂದು ದೀಪ್ ಸಿಂಗ್ ಪೊಲೀಸರ ಎದುರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಜ.26 ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್​ ವಶದಲ್ಲಿರುವ ಪಂಜಾಬಿ ನಟ ದೀಪ್ ಸಿಂಗ್ ನನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಮಾತನಾಡಿದ ಸಿದ್ದು ನಾನು ಯಾವುದೇ ದುರುದ್ದೇಶದಿಂದ ಕೆಂಪು ಕೋಟೆ ಬಳಿ ಹೋಗಲಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದ ವೇಳೆ ಕೋರ್ಟ್​​ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss