ಹೊಸದಿಗಂತ ವರದಿ, ಚಿತ್ರದುರ್ಗ
ಆದಾಯಕ್ಕಿಂತ ಆಸ್ತಿ ಜಾಸ್ತಿಯಾಗಿದೆ ಎಂದು ಕರ್ನಾಟಕದಲ್ಲಿ ಒಂದೇ ಒಂದು ಕೇಸ್ ಸಿಬಿಐಗೆ ನೀಡಿದ್ದಾರೆ. ಅದು ನನ್ನ ವಿರುದ್ಧ ದೂರು ನೀಡಿದ್ದು, ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಈಗ ಸಮನ್ಸ್ ನೀಡಿದ್ದಾರೆ. ಕಾನೂನಿಗೆ ಗೌರವ ನೀಡಿ ಉತ್ತರ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕಾರ್ಯನಿಮಿತ್ತ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು, ಸಿಬಿಐ ಸಮನ್ಸ್ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ನಾನು ಮಂತ್ರಿಯಾದಾಗ, ಕಳೆದ ೩೦ ವರ್ಷ ರಾಜಕಾರಣದಲ್ಲಿ, ನನ್ನ ಮೇಲೆ ಯಾವುದೇ ಆರೋಪ ಇಲ್ಲ. ಕಮಿಷನ್ ತನಿಖೆಗೆ ಯಾವುದೂ ಇಲ್ಲ. ಮಾಡಿರುವ ತನಿಖೆಗಳೆಲ್ಲವೂ ಕೂಡಾ ಕ್ಲೋಸ್ ಆಗಿವೆ ಎಂದರು.
ಹೆಲಗ ಮೇಲಿನ ಶಾಲು ತೋರಿಸಿ ಮಾತನಾಡಿದ ಅವರು, ಇದು ಬಾವುಟ. ಇರು ಇರುವುದು ಕಾಂಗ್ರೆಸ್ನವರಿಗೆ ಮಾತ್ರ, ಬೇರೆ ಯಾರಿಗೂ ಇಲ್ಲ. ಕಾಂಗ್ರೆಸ್ ದೇಶ ವಿರೋಧಿ ಎಂಬುವವರಿಗೆ ಇದೊಂದೇ ಉತ್ತರ ಎಂದು ಸಂಸದ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ವಿಚಾರ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಟಿಕೇಟ್ಗಾಗಿ ಪೈಟ್ ನಡೆಸುತ್ತಿರುವ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ನನ್ನ ಗಮನಕ್ಕೆ ಬಂದಿಲ್ಲ, ನೋಡೋಣ ಎಂದು ಹಾರಿಕೆ ಉತ್ತರ ನೀಡಿದರು.