Saturday, August 13, 2022

Latest Posts

ನಾನು ಶಾಸಕರ ಸಭೆಯಲ್ಲಿ ಭಾಗವಹಿಸಿರಲಿಲ್ಲ: ಶಾಸಕ ಎಸ್.ಎ.ರಾಮದಾಸ್

ಮೈಸೂರು: ಶಾಸಕ ಉಮೇಶ್ ಕತ್ತಿ ಅವರು ನಡೆಸಿದ ಶಾಸಕರ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದರು.

ನಾನು ಜನವರಿಯಲ್ಲಿ ಕೆಲಸದ ನಿಮ್ಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಉಮೇಶ್ ಕತ್ತಿ ಜೊತೆಗೆ ಮುರುಗೇಶ್ ನಿರಾಣಿ ಅವರ ಮನೆಗೆ ಸೌಜನ್ಯ ಕ್ಕಾಗಿ ಭೇಟಿ ಮಾಡಿದ್ದೇ, ಆಗ ಉತ್ತರ ಕರ್ನಾಟಕದ ಕೆಲ ಶಾಸಕರು ಇದ್ದರು, ನಾನು ಟೀ ಕುಡಿದು ಬಂದಿದ್ದೆ, ಆಗ ಯಾರೋ ತೆಗಿದಿದ್ದ ಪೋಟೋವನ್ನು ಈಗ ಶಾಸಕರು ನಡೆಸಿದ ಸಭೆಯ ಪೋಟೋ ಎಂದು ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ಯಾರು, ಯಾವ ಕುತಂತ್ರ ನಡೆಸಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ಯಡಿಯೂರಪ್ಪ ಅವರು ನನಗೆ ತಂದೆ ಸಮಾನ, ಅವರು ಮುಖ್ಯ ಮಂತ್ರಿಯಾಗಿ ಮುಂದುವರಿಯುತ್ತಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಅಸಮಾಧಾನಗೊಂಡಿಲ್ಲ, ಅವರು ನಮ್ಮನ್ನು ಬೆಳೆಸಿಕೊಂಡು ಬಂದವರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನ್ನ ಪಕ್ಷ ನಿಷ್ಟೆಯ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss