Sunday, June 26, 2022

Latest Posts

ನಾನು ಹಿಂದೂವಾದಿ, ಹಿಂದುತ್ವದಲ್ಲಿರುವ ಕುರುಬರಿಗೆ ನ್ಯಾಯ ಸಿಗಬೇಕು: ಕೆ. ಎಸ್. ಈಶ್ವರಪ್ಪ

ಹೊಸ ದಿಗಂತ ವರದಿ ಬಾಗಲಕೋಟೆ:

ನಾನು ಹಿಂದುವಾದಿ.ಹಿಂದುತ್ವದಲ್ಲಿ ಕುರುಬರು ಇದ್ದಾರೆ.ಕುರುಬ ಸಮಾಜಕ್ಕೆ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ನಡೆದ ಬೆಳಗಾವಿ ವಿಭಾಗಮಟ್ಟದ ಕುರುಬ ಸಮಾಜದ ಎಸ್.ಟಿ.ಹೋರಾಟ ಸಮಾವೇಶದಲ್ಲಿ ಅವರು ಭಾಗವಹಿಸುವ ಮುನ್ನ ಅವರು ಮಾತನಾಡಿದರು.

ಕುರುಬ ಸಮಾಜ ಹೋರಾಟದಿಂದ ತಮ್ಮ ಹಾಗೂ ತಮ್ಮ ಪುತ್ರನ ಮುಂಚೂಣಿಗೆ ತರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಇದನ್ನು ಯಾವುನೋ ಕುಡಿದವನು ಹೇಳ್ತಾನೆ.ನಾನು ರಾಜಕಾರಣಕ್ಕೆ ಕುರುಬ ಸಮಾಜ ಬಳಸಿಕೊಳ್ಳಲ್ಲ ಎಂದರು.

ಎಸ್ ಟಿ ಹೋರಾಟದ ಕುರುಬ ಸಮಾವೇಶದಿಂದ ಸಿದ್ದರಾಮಯ್ಯ ದೂರ ಉಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ,ನೀವೂ ಈ ಪ್ರಶ್ನೆ ಅವರನ್ನೇ ಕೇಳಿ,ನಾನು ನೂರು ಸಾರಿ ಕೇಳಿದ್ದೇನೆ.ಬರ್ತಿನಿ ಅಂತಾರೆ ಬರೋಲ್ಲ.ಬೆಂಬಲವಿದೆ ಅಂತಾರೆ ಆದರೆ ಬರೋಲ್ಲ.ನಾವೇನ್ಮೋಡೆಕೆ ಆಗುತ್ತೆ, ಕರೆದುಕೊಂಡು ಬರೋಕೆ ಆಗ್ತಾ.ಎಳೆದುಕೊಂಡು ಬರೋಕೆ ಆಗಲ್ಲ.ಎಲ್ಲರೂ ಬಂದಿದ್ದಾರೆ,ಅವರು ನ್ಯಾಯಯುತವಾಗಿ ಬರಬೇಕು ಎಂದರು.

ಕಾಂಗ್ರೆಸ್ ಜೆಡಿಎಸ್ ನಿಂದ ರಾಜಿನಾಮೆ ಕೊಟ್ಟು ಬಂದವ್ರು ಮಂತ್ರಿ ಆಗಬೇಕೆಂದು ಅಪೇಕ್ಷೆ ‌ಇದೆ.ನಮ್ಮ ಪಕ್ಷದ ನಾಯಕರು ಅವರನ್ನು ಮಂತ್ರಿ ಮಾಡ್ತೀವಿ ಎಂದು ಆಶ್ವಾಸನೆ ಕೊಟ್ಟಿದ್ದರು.ಕಾಂಗ್ರೆಸ್, ಜೆಡಿಎಸ್ ಗೆ ರಾಜಿನಾಮೆ ಕೊಟ್ಟು ಬರೆದಿದ್ರೆ ನಮ್ಮ ಸರ್ಕಾರವೇ ಬರ್ತಿರ್ಲಿಲ್ಲ.ನಮ್ಮ ಋಣ ತೀರಿಸಬೇಕಿದೆ ತೀರಿಸುತ್ತೇವೆ ಎಂದರು.

ನಮ್ಮ ಶಾಸಕರು ಮಂತ್ರಿ ಸ್ಥಾನ ಕೇಳುತ್ತಿದ್ದಾರೆ. ಚುನಾವಣೆ ವೇಳೆ ರಾಜ್ಯದ ಜನ ಪೂರ್ಣ ಬಹುಮತ ಕೊಟ್ಟಿದ್ರೆ ಈ ಗೊಂದಲ ಇರುತ್ತಿರಲಿಲ್ಲ.ರಾಜ್ಯದ ಜನ ಅಧಿಕಾರ ಮಾಡಿ ಎಂದು ವೋಟ್ ಕೊಟ್ರು.ಆದ್ರೆ ಬಹುಮತ ಕೊಡಲಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss