ನಾನ್ವೆಜ್ ಪ್ರಿಯರಿಗೆ ಈಸಿಯಾದ ಚಿಕನ್ ಫ್ರೈ ರೆಸಿಪಿ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕೇವಲ ೪೫ ನಿಮಿಷದೊಳಗೆ ಈ ರೆಸಿಪಿ ಮಾಡಬಹುದಾಗಿದ್ದು, ಮಕ್ಕಳು, ದೊಡ್ಡವರಿಗೂ ಇದು ಇಷ್ಟವಾಗುವ ರೆಸಿಪಿಯಾಗಿದೆ. ಕೆಲವೇ ಪದಾರ್ಥಗಳನ್ನು ಬಳಸಿ ಈ ರೆಸಿಪಿ ಮಾಡಬಹುದಾಗಿದೆ. ಹಾಗಾದರೆ ಈ ಭಾನುವಾರಕ್ಕೆ ಚಿಕನ್ ಫ್ರೈ ಮಾಡಿನೋಡಿ..
- ಮೊದಲು ಚಿಕನ್ ಚೆನ್ನಾಗಿ ತೊಳೆದುಕೊಂಡು, ಅದಕ್ಕೆ ಉಪ್ಪು,ನಿಂಬೆರಸ,ಅರಿಶಿಣ ಹಾಗೂ ಮೊಸರು ಹಾಕಿ ಮ್ಯಾರಿನೇಟ್ ಮಾಡಿ.
- ನಂತರ ಬಾಣಲಿಗೆ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಿ, ನಂತರ ಇದಕ್ಕೆ ಮೆಣಸಿನ ಕಾಯಿ ಹಾಕಿ.
- ಈ ಮಿಶ್ರಣಕ್ಕೆ ಚಿಕನ್ ಹಾಕಿ ಬೇಯಿಸಿ, ಸ್ವಲ್ಪ ಬೇಯುತ್ತಿದ್ದಂತೆ ಒಂದು ಸ್ಪೂನ್ ಮೆಣಸಿನ ಪುಡಿ ಹಾಕಿ ಎಣ್ಣೆಯಲ್ಲೇ ಬಾಡಿಸಿ.
- ಈ ಮಿಶ್ರಣಕ್ಕೆ ಟೊಮ್ಯಾಟೊ ಹಾಗೂ ಚಿಕನ್ ಮಸಾಲಾ ಪುಡಿ ಹಾಕಿ. ಟೊಮ್ಯಾಟೊ ಮೆತ್ತಗಾಗುವರೆಗೂ ಬೇಯಿಸಿ.
- ಈ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ, ಪಾತ್ರೆ ಮುಚ್ಚಿ ಬೇಯಿಸಿ. ಹೀಗೆ ಹತ್ತು ನಿಮಿಷ ಮಾಡಿ.
ಡ್ರೈ ಬೇಕು ಎನ್ನುವವರು ಸಣ್ಣ ಉರಿಯಲ್ಲಿ ತುಂಬಾ ಹೊತ್ತು ಬೇಯಿಸಿ. ಇಲ್ಲ ಗ್ರೇವಿ ಬೇಕು ಎನ್ನುವವರು ನೀರು ಇರುವಂತೆಯೇ ಆಫ್ ಮಾಡಿದರೆ ಚಿಕನ್ ರೆಸಿಪಿ ರೆಡಿ.