Wednesday, June 29, 2022

Latest Posts

ನಾಯಿ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹೊಸ ದಿಗಂತ ವರದಿ, ಮಳವಳ್ಳಿ:

ತಾಲ್ಲೂಕಿನ ಬಾಚನಹಳ್ಳಿ ಇಂದಿರಾ ಗಾಂಧಿ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿರುವುದು ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ನಾಯಿಗಳು ಶುದ್ಧ ಮಾಡುತ್ತಿದ್ದನ್ನು ಗಮಿಸಿದ ವಸತಿ ಶಾಲೆಯ ಕಾವಲುಗಾರರು ಬೆಳಿಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದ ಹಿನ್ನಲೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದ ಪರಿಶೀಲನೆ ನಡೆಸಿದಾಗ ಸುತ್ತ ಮುತ್ತ ಚಿರತೆ ಹೆಜ್ಜೆ ಗುರುತು ಹಾಗೂ ನಾಯಿ ಮೇಲೆ ದಾಳಿ ಮಾಡಿರುವುದು ಪತ್ತೆಯಾಗಿದ್ದು, ಚಿರತೆ ಸೆರೆ ಹಿಡಿಯಲು ಸೋಮವಾರ ಬೋನು ಇಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಆಸೀಫ್ ಅಹಮದ್ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss