Thursday, January 28, 2021

Latest Posts

ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 22 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡ ದಾದಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ನಾಲ್ಕೂವರೆ ತಿಂಗಳಲ್ಲಿ ಸುಮಾರು 22 ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕಳೆದ ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ಒಂದು ಬಾರಿಯೂ ವರದಿ ಪಾಸಿಟಿವ್ ಬಂದಿಲ್ಲ. ನಾನಿರುವ ಪರಿಸರದ ಸುತ್ತ ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಹೀಗಾಗಿ ಪರೀಕ್ಷೆಗೆ ಒಳಪಡಬೇಕಾಯಿತು’ ಎಂದು ವರ್ಚುವಲ್‌ ಮಾಧ್ಯಮಗೋಷ್ಠಿಯೊಂದರಲ್ಲಿ ಗಂಗೂಲಿ ಹೇಳಿದ್ದಾರೆ.
ದುಬೈಗೆ ಪ್ರವಾಸ ಮಾಡಿ ಬಂದಿದ್ದೆ, ವಯಸ್ಸಾದ ತಂದೆತಾಯಿಯ ಜತೆಗೆ ವಾಸಿಸುತ್ತಿರುವ ಕಾರಣದಿಂದಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಬಂತು ಎಂದು ಗಂಗೂಲಿ ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!