Wednesday, July 6, 2022

Latest Posts

ನಾಲ್ಕು ಜನ ಸಾಧಕರಿಗೆ ಜನ್ಮ ದಿನದ ಶುಭ ಕೋರಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಡಿ. ದೇವರಾಜ ಅರಸು, ಎನ್. ಆರ್.ನಾರಾಯಣ ಮೂರ್ತಿ, ರಾಜೀವ್ ಗಾಂಧಿ ಮತ್ತು ಜೆ.ಸಿ. ಮಾಧವ ಸ್ವಾಮಿಯವರಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.

ಈ ಮೇಲಿನ ನಾಲ್ಕು ಸಾಧಕರಿಗೆ ಟ್ವೀಟ್ ಮೂಲಕ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.ನಾಡು ಕಂಡ ಧೀಮಂತ ಆಡಳಿತಗಾರ, ಭೂ ಸುಧಾರಣೆ, ಕರ್ನಾಟಕ ಋಣಮುಕ್ತ ಕಾಯ್ದೆಗಳನ್ನು ಜಾರಿಗೆ ತರುವ ಜೊತೆಗೆ, ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ ಅಪರೂಪದ ಜನನಾಯಕ, ದಿವಂಗತ ಶ್ರೀ ಡಿ.ದೇವರಾಜ ಅರಸುರವರ ಜನ್ಮದಿನದಂದು ಅವರಿಗೆ ನನ್ನ ಅನಂತ ನಮನಗಳು. ಅರಸು ಅವರ ಬದುಕು ಮತ್ತು ಸಾಧನೆಗಳು ಎಲ್ಲ ಕಾಲಕ್ಕೂ ಮಾದರಿಯಾಗಿದೆ ಎಂದು ಡಿ.ದೇವರಾಜ ಅರಸು ಅವರಿಗೆ ಶುಭಾಷಯ‌ ತಿಳಿಸಿದ್ದಾರೆ.

ಪ್ರಖ್ಯಾತ ಉದ್ಯಮಿ, ಹೆಮ್ಮೆಯ ಕನ್ನಡಿಗ ಹಾಗು ಇನ್ಫೋಸಿಸ್‌ ಸಹ-ಸಂಸ್ಥಾಪಕರಾಗಿರುವ ಪದ್ಮವಿಭೂಷಣ ಶ್ರೀ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ ಎಂದು ನಾರಾಯಣಮೂರ್ತಿ ಅವರಿಗೆ ಶುಭಾಷಯ‌ ತಿಳಿಸಿದ್ದಾರೆ.

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು, ನನ್ನ ಆತ್ಮೀಯರೂ ಆದ ಶ್ರೀ ಜೆ.ಸಿ. ಮಾಧುಸ್ವಾಮಿಯವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ ಎಂದು ಮಾಧುಸ್ವಾಮಿಯವರಿಗೆ ಶುಭಾಷಯ‌ ತಿಳಿಸಿದ್ದಾರೆ

ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ರಾಜೀವ್ ಗಾಂಧಿಯವರ ಜನ್ಮದಿನದ ಗೌರವಪೂರ್ವಕ ಸ್ಮರಣೆಗಳು ಎಂದು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss