Monday, July 4, 2022

Latest Posts

ನಾಲ್ಕು ದಿನಗಳಿಂದ ತಣ್ಣಗಾಗಿದ್ದ ಮಹಾಮಾರಿ ಕೊರೋನಾ ಮತ್ತೆ ಎಂಟ್ರಿ: 2 ಜನರಲ್ಲಿ ಸೋಂಕು ದೃಢ

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ತಣ್ಣಗಾಗಿದ್ದ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಮತ್ತೆ ಜಿಲ್ಲೆಯಲ್ಲಿ ಮುಂದುವರೆದಿದ್ದು, 6 ವರ್ಷದ ಬಾಲಕಿ ಸೇರಿದಂತೆ 2 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 311 ಏರಿಕೆಯಾಗಿದೆ.
ಮಂಗಳವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲಟೆನ್ ದಲ್ಲಿ ಸೋಂಕಿತರ ದ್ವೀತಿಯ ಸಂಪರ್ಕ ಹೊಂದಿರುವ 6 ವರ್ಷದ ಬಾಲಕಿ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ 21 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈ ವರೆಗೆ ಕೊರೋನಾ ವೈರಸ್ ಸೋಂಕಿತ 311 ಜನರಲ್ಲಿ 282 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದು, 28 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss