Thursday, March 4, 2021

Latest Posts

ನಾಲ್ವರು ಪ್ರತಿಭಟನಾ ನಿರತ ರೈತ ಮುಖಂಡರ ಹತ್ಯೆಗೆ ಪಿತೂರಿ: ರೈತರ ಆರೋಪ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದು, ಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆಸಲಾಗಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

ಗಣರಾಜ್ಯೋತ್ಸವದಂದು ಪ್ರತಿಭಟನೆ ನಡೆಸಲು ನಿಯೋಜಿಸಿರುವ ಎರಡು ತಂಡಗಳ ಪೈಕಿ ನಾಲ್ಕು ರೈತ ಮುಖಂಡರನ್ನು ಗುಂಡಿಕ್ಕಿ ಹತ್ಯೆ ಮಾಡಲು ಪತೂರಿ ನಡೆಸಲಾಗಿತ್ತು. ಹತ್ಯೆ ಮಾಡಲು ನಿಯೋಜನೆಯಾಗಿರುವ ವ್ಯಕ್ತಿಯೋರ್ವನನ್ನು ಸಿಂಗು ಗಡಿ ಭಾಗದ ರೈತರು ಹಿಡಿದಿದ್ದು, ಮಾಧ್ಯಮಗಳೆದುರು ತೋರಿಸಿದ್ದಾರೆ.

ಈ ವಿಷಯ ಬಹಿರಂಗವಾದರೆ ನನ್ನ ಮತ್ತು ನಮ್ಮ ತಂಡದ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಂಧಿತ ಆರೋಪಿ ಹೇಳಿದ್ದಾನೆ.

ಈ ಬಗ್ಗೆ ಸಿಂಗು ಗಡಿಯಲ್ಲಿರುವ ಪ್ರತಿಭಟನಾ ನಿರತ ರೈತರು ಸುದ್ದಿಗಾರರೊಂದಿಗೆ ಮಾತನಾಡಿದ್ದು. ಟ್ರಾಕ್ಟರ್ ರ್ಯಾಲಿ ಸಮಯಲ್ಲಿ ಓರ್ವನಿಗೆ ಪೊಲೀಸರಂತೆ ವೇಷ ಧರಿಸಿ ರೈತರ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆರೋಪಿಸಿದರು.

ಈ ಮೂಲಕ ಜನವರಿ 26ರಂದು ಗಣರಾಜ್ಯೋತ್ಸವ ದಿನ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತೊಂದರೆ ಮಾಡಲು ದುಷ್ಕರ್ಮಿಗಳ ಯೋಜಿಸಿದ್ದರು ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!