ಹೊಸ ದಿಗಂತ ವರದಿ, ಮೈಸೂರು:
ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್ನಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ, ಕುಪಿತನಾದ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬ ಎದುರಾಳಿ ದೂರುದಾರರ ಮೇಲೆ ಸುಪಾರಿ ಕೊಟ್ಟು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಮೈಸೂರು ಮಹಾನಗರ ಪಾಲಿಕೆ ರೆವಿನ್ಯೂ ಇನ್ಸೆ÷್ಪಕ್ಟರ್ ಕುಪ್ಪರಾಜು ವಿರುದ್ಧ ಸುಪಾರಿ ಕೊಟ್ಟ ಆರೋಪ ಕೇಳಿ ಬಂದಿದೆ. ಶಿವಕುಮಾರ್ ವಾಸವಿರುವ ಮನೆ ಹಾಗೂ ಖಾಲಿ ಜಾಗದ ಮೇಲೆ ಪ್ರಕರಣವಿತ್ತು. ಆದರೆ ನ್ಯಾಯಾಲಯದಲ್ಲಿ ಶಿವಕುಮಾರ್ ಪರ ತೀರ್ಪು ಬಂದ ಕಾರಣ ಕುಪಿತನಾದ ಕುಪ್ಪರಾಜು, ಶಿವಕುಮಾರ್ ಕುಟುಂಬದವರ ಕೈಕಾಲು ಮುರಿಯಲು ಸುಪಾರಿ ನೀಡಿದ್ದು,
ಸುಪಾರಿ ಪಡೆದ ವ್ಯಕ್ತಿಗಳು ಮೈಸೂರಿನ ಬಿಬಿ ಕೇರಿಯ ಪುಲಿಕೇಶಿ ರಸ್ತೆಯಲ್ಲಿ ದೂರುದಾರ ಶಿವಕುಮಾರ್ ಹಾಗೂ ಕುಟುಂಬದ ನಾಲ್ವರ ಮೇಲೆ ಚಾಕು ಹಾಗೂ ಮಾರಕಾಸ್ತçದಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ದೃಶ್ಯಗಳು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ. ಕುಪ್ಪರಾಜು ತಮ್ಮ ಹರಿಪ್ರಸಾದ್, ವಿಶ್ವನಾಥ್ ಅವರಿಂದ ಚಾಕು ಇರಿತದ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಶಿವಕುಮಾರ್ ಹಾಗೂ ಕುಟುಂಬಸ್ಥರಿಗೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.