ನಾಳೆಯಿಂದ ಏಮ್ಸ್ ಒಪಿಡಿ ಬಂದ್

0
81

ಹೊಸದಿಲ್ಲಿ: ದೇಶಾದ್ಯಂತ ಹರಡುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟಲು ಮಂಗಳವಾರದಿಂದ(ಮಾ.24) ಮುಂದಿನ ಆದೇಶದವರೆಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ತನ್ನ ಒಪಿಡಿಗಳನ್ನಯ ಬಂದ್ ಮಾಡಲಿದೆ.

ಏಮ್ಸ್ ನ ಸಂಪನ್ಮೂಲಗಳನ್ನು ಕೊರೋನಾ ಪೀಡಿತರಿಗೆ ಬಳಸಿಕೊಳ್ಳುವುದಕ್ಕಾಗಿ ಮಾ.24ರಿಂದ ತನ್ನ ಎಲ್ಲಾ ವಿಭಾಗದ ಒಪಿಡಿಗಳನ್ನು ಮತ್ತು ಹೊಸ ರೋಗಿಗಳ ನೊಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಏಮ್ಸ್ ತಿಳಿಸಿದೆ.

ಮಾ. 21ರಿಂದ ತುರ್ತು ಜೀವ ಉಳಿಸುವ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ನಿರ್ದೇಶಿಸಿತ್ತು.ಏಮ್ಸ್ ತನ್ನ ಎಲ್ಲಾ ಅನಗತ್ಯ ಕಾರ್ಯವಿಧಾನಗಳು ಮತ್ತು ತುರ್ತುರಹಿತ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಸುತ್ತೋಲೆ ಹೊರಡಿಸಿತ್ತು. ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳು ಮತ್ತು ಆಮ್ಲಜನಕದ ಮಾಸ್ಕ್ ಗಳನ್ನು ಸಂಗ್ರಹಿಸಲು ಮತ್ತು ಆಯಾ ಆವರಣದಲ್ಲಿ ಜನರು ಸೇರುವುದನ್ನು ಕಡಿಮೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ.

LEAVE A REPLY

Please enter your comment!
Please enter your name here