spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಳೆಯಿಂದ ಕಾರವಾರ ಮತ್ತು ಮಂಗಳೂರಿನಲ್ಲಿ ಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

- Advertisement -Nitte

ಬೆಂಗಳೂರು: ಮಂಗಳೂರು ಹಾಗೂ ಕಾರವಾರದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರತಿ ನಿತ್ಯವು ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಒಂದು ದಿನ ಬಿಸಿಲಿದ್ದರೆ ಮತ್ತೊಂದು ದಿನ ಮಳೆ ಹೀಗೆ ಬದಲಾಗುತ್ತಿದೆ.
ಜೂನ್ 24ರಿಂದ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆಯಿದೆ. ಬೆಂಗಳೂರಿನಲ್ಲಿ ಜೂನ್ 22 ರಂದು ಮಧ್ಯಾಹ್ನದವರೆಗೂ ಸ್ವಲ್ಪ ಬಿಸಿಲು, ಉಳಿದಂತೆ ಮೋಡಕವಿದ ವಾತಾವರಣವಿತ್ತು, ಸಂಜೆ 5 ಗಂಟೆ ಸುಮಾರಿಗೆ ಮಳೆಯಾಗಿತ್ತು.
ದಕ್ಷಿಣ ಒಳನಾಡನಲ್ಲಿ ಮುಂಗಾರು ದುರ್ಬಲವಾಗಿದೆ. ಕದ್ರ, ಸುಬ್ರಹ್ಮಣ್ಯ, ಕೊಲ್ಲೂರು, ಉಪ್ಪಿನಂಗಡಿ, ಕಾರ್ಕಳದಲ್ಲಿ ಹೆಚ್ಚು ಮಳೆಯಾಗಿದೆ.ಸುಳ್ಯ, ಮಾಣಿ, ಧರ್ಮಸ್ಥಳ, ಭಾಗಮಂಡಲ, ಕಮ್ಮರಡಿ, ತಿಪಟೂರು, ಪಣಂಬೂರು, ಗೋಕರ್ಣ, ಮಡಿಕೇರಿ, ವಿರಾಜಪೇಟೆ, ಶೃಂಗೇರಿ, ಕುಣಿಗಲ್, ಮುಲ್ಕಿ, ಶಿರಾಲಿ, ತ್ಯಾಗರ್ತಿ, ತಾಳಗುಪ್ಪ, ಸಿದ್ದಾಪುರ, ಹಾರಂಗಿ, ಹೊಸನಗರ, ಕೊಟ್ಟಿಗೆಹಾರ, ಎಚ್‌ಡಿ ಕೋಟೆ, ಚನ್ನಗಿರಿ,ಹೊಳಲ್ಕೆರೆಯಲ್ಲಿ ಸಾಧಾರಣ ಮಳೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜೂನ್ 27ರವರೆಗೂ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ಒಣಹವೆ ಮುಂದುವರೆದಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss