Tuesday, June 28, 2022

Latest Posts

ನಾಳೆಯಿಂದ ಪುನರಾರಂಭಗೊಳ್ಳಲಿದೆ ತಾಳಗುಪ್ಪ- ಬೆಂಗಳೂರು ನಡುವಿನ ರೈಲು ಸಂಚಾರ

ಹೊಸ ದಿಗಂತ ವರದಿ, ಶಿವಮೊಗ್ಗ:

ಕಳೆದ ಮಾರ್ಚ್ 25 ರಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಡಿಸೆಂಬರ್ 07 ರ ನಾಳೆಯಿಂದ ಪ್ರಾಯೋಗಿಕವಾಗಿ ಪುನರಾರಂಭಗೊಳ್ಳಲಿದೆ.
ತಾಳಗುಪ್ಪ- ಬೆಂಗಳೂರು ನಡುವಿನ ರೈಲು ಸಂಚಾರ ಡಿಸೆಂಬರ್ 07 ರಿಂದ ಪ್ರಾರಂಭಗೊಳ್ಳಲಿದೆ. 06529 ಸಂಖ್ಯೆಯ ರೈಲು ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದೆ. ಡಿಸೆಂಬರ್ 08 ರಂದು 06530 ಸಂಖ್ಯೆಯ ರೈಲು ಗಾಡಿ ತಾಳಗುಪ್ಪದಿಂದ ಸಂಚಾರ ನಡೆಸಲಿದೆ.
ಮೈಸೂರು ಮತ್ತು ಬೆಂಗಳೂರಿಗೆ ಡಿಸೆಂಬರ್ 09 ರಿಂದ ರೈಲು ಸಂಚಾರ ಆರಂಭಗೊಳ್ಳಲಿದೆ. ಆದರೆ ಕಾಯ್ದಿರಿಸಿದ ಟಿಕೇಟ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ದರದಲ್ಲಿಯೇ ಈ ರೈಲುಗಳು ಪ್ರಾಯೋಗಾರ್ಥ ಓಡಾಟ ನಡೆಸಲಿವೆ. ಪ್ರಯಾಣಿಕರ ಸ್ಪಂದನೆ ಗಮನಿಸಿ ಸಂಚಾರವನ್ನು ಮುಂದುವರೆಸುವ ಬಗ್ಗೆ ರೈಲ್ವೆ ಇಲಾಖೆ ನಿರ್ಧಾರ ಕೈಗೊಳ್ಳಲಿದೆ. ರೈಲ್ವೆ ಪ್ರಯಾಣದ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಡಿಸೆಂಬರ್ 09 ರಂದು ಮೈಸೂರಿನಿಂದ ತಾಳಗುಪ್ಪಕ್ಕೆ ರೈಲು ಗಾಡಿ ಸಂಖ್ಯೆ 06227 ತನ್ನ ಮೊದಲ ಪ್ರಯಾಣ ಆರಂಭಿಸಲಿದೆ. ಡಿಸೆಂಬರ್ 10 ರಂದು ತಾಳಗುಪ್ಪದಿಂದ ಮೈಸೂರಿಗೆ ರೈಲು ಗಾಡಿ ಸಂಖ್ಯೆ 06228 ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಸದ್ಯ ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ಧಿ ಎಕ್ಸ್‌ಪ್ರೆಸ್ ಮಾತ್ರ ಸಂಚರಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss