ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಾಳೆಯಿಂದ ಓಪಿಡಿ ಪುನರಾರಂಭಗೊಳ್ಳಲಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಹಿನ್ನಲೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿತ್ತು. ಇದೀಗ ಆಸ್ಪತ್ರೆಯ ಓಪಿಡಿ ವಿಭಾಗಗಳನ್ನು ತೆರೆಯಲಾಗುತ್ತದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಓಪಿಡಿಗಳಲ್ಲಿ ಹೆರಿಗೆ, ಶಸ್ತ್ರ ಚಿಕಿತ್ಸೆ, ಸಾಮಾನ್ಯ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ರೇಡಿಯೋ ಥೆರಪಿ ಸೇರಿದಂತೆ ಹಲವು ಚಿಕಿತ್ಸೆಗಳನ್ನು ಆಸ್ಪತ್ರೆ ನೀಡಲು ಮುಂದಾಗಿದೆ. ಏ.15ರಿಂದ ಬೆಳಗ್ಗೆ 8:30ರಿಂದ 1 ಗಂಟೆಯವರೆಗೂ ಒಪಿಡಿ ಕಾರ್ಯ ನಿರ್ವಹಿಸಲಿದೆ.
ಆಸ್ಪತ್ರೆಗೆ ಹೋಗುವ ಹೊರರೋಗಿಗಳು ಮೊದಲು ತಾತ್ಕಾಲಿಕ ಚಿಕಿತ್ಸಾಲಯಕ್ಕೆ ಭೇಟಿ ನೀಡಿಬೇಕು. ರೋಗಿಗಳ ಜೊತೆಯಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಬಿಡಲಾಗುತ್ತದೆ.
ಟೆಲಿಮೆಡಿಸಿನ್ ಮೂಲಕ ವೈದ್ಯರ ಸಮಾಲೋಚನ ಸೇವೆ ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಲಭ್ಯವಿರುತ್ತದೆ. ದೂರವಾಣಿ ಸಂಖ್ಯೆ. 080-47192235ಗೆ ಕರೆ ಮಾಡಹುದು ಎಂದು ಕೆಎಂಸಿಯ ಡೀನ್ ಡಾ. ಶರತ್ ರಾವ್ ತಿಳಿಸಿದ್ದಾರೆ.