Wednesday, August 17, 2022

Latest Posts

ನಾಳೆಯಿಂದ ಮತ್ತೆ ಪ್ರವಾಸಿಗರಿಗೆ ತೆರೆಯಲಿದೆ ತಾಜ್ ಮಹಲ್: ದಿನಕ್ಕೆ 5 ಸಾವಿರ ಜನರಿಗೆ ವೀಕ್ಷಣೆಗೆ ಅವಕಾಶ!

ಹೊಸದಿಲ್ಲಿ: ಕೊರೋನಾದಿಂದ ಆರು ತಿಂಗಳ ಕಾಲ ಮುಚ್ಚಿದ ನಂತರ ಆಗ್ರಾದ ತಾಜ್ ಮಹಲ್ ಸೆಪ್ಟೆಂಬರ್ 21ರಂರಿಂದ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜ್ ಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.
ಸೋಮವಾರದಿಂದ ಮತ್ತೆ ತೆರೆಯುವ ಆಗ್ರಾ ಕೋಟೆಯಲ್ಲಿ ಪ್ರತಿದಿನ 2,500 ಸಂದರ್ಶಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರವಾಸಿಗರು ಒಂದೇ ಫೋಟೋಕ್ಲಿಕ್ಕಿಸಲು ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸೋಲೋ ಫೋಟೋಗಳಿಗೆ ಪೋಸ್ ನೀಡಲು ಅನುಮತಿ ನೀಡಲಾಗಿದೆ. ಅದೇ ರೀತಿ ನಗದುರಹಿತ ವಹಿವಾಟಿಗೆ ಮಾತ್ರ ಅವಕಾಶ ನೀಡಲಾಗುವುದು .
ಆವರಣದೊಳಗೆ ಪರವಾನಗಿ ಪಡೆದ ಮಾರ್ಗದರ್ಶಿಗಳನ್ನು ಮಾತ್ರ ಅನುಮತಿಸಲಾಗುವುದು. ತಾಜ್ ಮಹಲ್ ಶುಕ್ರವಾರ ಮತ್ತು ಭಾನುವಾರ ಮುಚ್ಚಲಿದೆ. ಆಗ್ರಾ ಕೋಟೆಯನ್ನು ಭಾನುವಾರಮಾತ್ರ ಮುಚ್ಚಲಾಗುತ್ತದೆ.
ಜುಲೈ 6ರಿಂದ ಎಲ್ಲ ಎಎಸ್ ಐ ಸಂರಕ್ಷಿತ ಸ್ಮಾರಕಗಳನ್ನು ಪುನಃ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಅಂತಿಮ ನಿರ್ಧಾರ ಸ್ಥಳೀಯ ಆಡಳಿತಗಳಿಗೆ ಬಿಟ್ಟದ್ದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!