ಹೊಸದಿಗಂತ ಆನ್ಲೈನ್ ಡೆಸ್ಕ್:
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ನೀಡುವ ತಾಲೀಮು ನಾಳೆ ನಡೆಯಲಿದೆ.
ಬರುವ ದಿನಗಳಲ್ಲಿ ಲಸಿಕೆ ನೀಡುವ ಬೃಹತ್ ಲಸಿಕಾ ಕಾರ್ಯಕ್ರಮ ನಡೆಯುವುದು. ಅದಕ್ಕೂ ಮುನ್ನ ತಾಲೀಮಿನ ಅವಶ್ಯ ಇದೆ.ಲಸಿಕೆ ನೀಡುವಾಗ ಎದುರಾಗುವ ಸಮಸ್ಯೆಗಳು, ಯೋಜನೆಯಲ್ಲಿ ಕಂಡುಬರುವ ನ್ಯೂನತೆಗಳು, ಇವುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ತಾಲೀಮು ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಲಸಿಕೆ ನೀಡುವ ಕಾರ್ಯಕ್ರಮಕ್ಕಾಗಿ ಕೋ-ವಿನ್ ಎನ್ನುವ ಆಪ್ ಸಿದ್ಧಪಡಿಸಿದ್ದು, ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವುದಕ್ಕೂ ತಾಲೀಮು ಸಹಾಯ ಮಾಡಲಿದೆ.