ಹೊಸದಿಗಂತ ಆನ್ಲೈನ್ ಡೆಸ್ಕ್:
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಸಂಘಟನೆಗಳು ನಾಳೆ ಬಂದ್ ಆಚರಿಸಲಿದ್ದು, ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಬಿಗಿ ಬಂದೋಬಸ್ತ್ಗೆ ಆದೇಶಿಸಿದ್ದಾರೆ. ಡಿ.4 ರ ಮಧ್ಯರಾತ್ರಿಯಿಂದಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನಾಳೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು,ಮೆಡಿಕಲ್ ಸ್ಟೋರ್ಗಳು ಇರಲಿವೆ. ಹಾಲು, ಹಣ್ಣು,ತರಕಾರಿ,ದಿನಸಿ ಎಂದಿನಂತೆ ಇರಲಿದೆ.ರೈಲು,ಮೆಟ್ರೋ,ಬಸ್ ಹಾಗೂ ಓಲಾ ಊಬರ್ ಕೂಡ ಇರಲಿವೆ. ಲಾರಿ,ಬಾರ್ ಅಂಡ್ ರೆಸ್ಟೋರೆಂಟ್, ಥಿಯೇಟರ್, ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಕೂಡ ಇರಲಿವೆ.
ನಾಳೆ ಆಟೋ ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿರುವುದರಿಂದ ಆಟೋ ಇರುವುದಿಲ. ಗಾರ್ಮೆಂಟ್ಸ್,ಕೈಗಾರಿಕೆ ಪ್ರದೇಶಗಳಲ್ಲಿ ಕಾರ್ಯ ಸ್ಥಗಿತವಾಗಲಿದೆ. ಬೀದಿ ಬದಿ ವ್ಯಾಪಾರ ಕೂಡ ಇರುವುದಿಲ್ಲ.