Wednesday, August 10, 2022

Latest Posts

ನಾಳೆ ಕರ್ನಾಟಕ ಬಂದ್!! ಪರೀಕ್ಷೆಗಳು ಮುಂದೂಡಿಕೆ: ಇನ್ನೇನಿರುತ್ತೆ?

ಬೆಂಗಳೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಸೆ.28 ಸೋಮವಾರ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಿದೆ.

ಸೆ.25ರಂದು ಮುಖ್ಯಮಂತ್ರಿ ಬಿ.ಎಸ್ ವೈ ಹಾಗೂ ರೈತ ಮುಖಂಡರು ಚರ್ಚೆ ನಡೆಸಿದ್ದು, ಚರ್ಚೆಯಲ್ಲಿ ನಡೆದ ಮಾತುಕತೆ ವಿಫಲವಾಗಿರುವ ಹಿನ್ನಲೆ ಸೋಮವಾರ ಬಂದ್ ನಡೆಸಲು ರೈತ ಹಾಗೂ ಕಾರ್ಮಿಕ ಸಂಘಗಳು ಘೋಷಿಸಿದೆ. ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಂ ಪಾರ್ಕ್ ನ ವರೆಗು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಐಕ್ಯ ಸಮಿತಿ ಸದಸ್ಯರು ತಿಳಿಸಿದ್ದಾರೆ.

ರೈತ ಹಾಗೂ ಕಾರ್ಮಿಕ ಸಂಘಟನೆಗಳು ಬಂದ್ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಆಟೋ ಚಾಲಕರು, ಓಲಾ, ಊಬರ್, ಟ್ಯಾಕ್ಸಿ ಚಾಲಕರು ಸಾಥ್ ನೀಡಲಿದ್ದಾರೆ.

ಕರ್ನಾಟಕ ಬಂದ್ ಹಿನ್ನಲೆ ನಾಳೆ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಸೇರಿದಮತೆ ಎಲ್ಲಾ ಪರೀಕ್ಷೆಗಳು ಮುಂದೂಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ, ವಜಯಪುರದ ಮಹಿಳಾ ವಿಶ್ವವಿದ್ಯಾಲಯ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ ಹಾಗೂ ಹಿದುಸ್ತಾನಿ ಸಮಗೀತದ ಪರೀಕ್ಷೆಗಳು ಮುಂದೂಡಲಾಗಿದೆ. ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಸೆ.29ಕ್ಕೆ ಪರೀಕ್ಷೆ ನಿಗದಿ ಮಾಡಲಾಗಿದೆ.

ಏನಿರುತ್ತೆ?: ಬಸ್ ಸಂಚಾರ, ಹೋಟೆಲ್, ರೆಸ್ಟೋರೆಂಟ್, ಸರ್ಕಾರಿ ಕಚೇರಿ, ಹಾಲು ತರಕಾರಿ ಹಾಗೂ ದಿನಸಿ ಅಂಗಡಿಗಳು ತೆರೆದಿರುತ್ತದೆ.

ಏನಿರೊಲ್ಲ?: ಆಟೋ, ಓಲಾ, ಊಬರ್, ಪರೀಕ್ಷೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss