Wednesday, June 29, 2022

Latest Posts

ನಾಳೆ ಕೊಡವ ತಕ್ಕ ಮುಖ್ಯಸ್ಥರ ಸಮಾವೇಶ: ಯುಕೊ ಸಂಘಟನೆಯಿಂದ ಆಯೋಜನೆ

ಹೊಸದಿಗಂತ ವರದಿ, ಪೊನ್ನಂಪೇಟೆ:

ಕೊಡವ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ಅನಾದಿ ಕಾಲದಿಂದಲೂ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಮತ್ತು ಇದರ ನೆರಳಲ್ಲಿ ಸಮೃದ್ಧ ಪರಂಪರೆಯನ್ನು ಹೊಂದಿದ್ದ ಕೊಡವ ಆಧ್ಯಾತ್ಮಿಕ ನಾಯಕತ್ವವಾದ ‘ತಕ್ಕಾಮೆ’ಯನ್ನು ಬಲಪಡಿಸಲು ಶುಕ್ರವಾರ(ಡಿ.25) ಕೊಡವ ತಕ್ಕೊರ್ಮೆಯನ್ನು ಆಯೋಜಿಸಲಾಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಝೇಷನ್ (ಯುಕೊ) ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನದ್ಯಾಂತ 100ಕ್ಕೂ ಅಧಿಕ ತಕ್ಕಮುಖ್ಯಸ್ಥರು ಭಾಗವಹಿಸಲು ಹೆಸರು ನೋಂದಾಯಿಸಿಕೊAಡಿದ್ದು, ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪ ಬೇಗೂರು ಗ್ರಾಮದಲ್ಲಿರುವ ಕೇವ್‌ರಿಡ್ಜ್ ರೆಸಾರ್ಟ್ನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಬೆಳಗ್ಗೆ 10.30ಕ್ಕೆ ದೇಶತಕ್ಕರಾದ ಮಾತಂಡ ಮೊಣ್ಣಪ್ಪ ಉದ್ಘಾಟಿಸಲಿದ್ದಾರೆ. ಉಳಿದಂತೆ 7 ಸೀಮೆ ತಕ್ಕರು, ಸಾಂಪ್ರದಾಯಿಕ 35 ನಾಡುಗಳಿಗೆ ಸಂಬAಧಿಸಿದ ನಾಡು ತಕ್ಕರು ಹಾಗು ಊರು ತಕ್ಕರುಗಳು ಸೇರಿದಂತೆ 120ಕ್ಕೂ ಹೆಚ್ಚು ತಕ್ಕ ಮುಖ್ಯಸ್ಥರುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಗೌರವಪೂರ್ವಕವಾಗಿ ನಡೆಸಿಕೊಂಡು ಬರುತ್ತಿರುವ ‘ತಕ್ಕಾಮೆ’ ಎಂಬ ವಿಶಿಷ್ಟ ಆಡಳಿತಾತ್ಮಕ ವ್ಯವಸ್ಥೆಯು ಇಂದು ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಬಹುತೇಕ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಆದರೆ, ಈ ತಕ್ಕಾಮೆ ಎಂಬ ವ್ಯವಸ್ಥೆಯಲ್ಲಿ ಕೊಡವರ ಮಂದ್ ಎಂಬ ವಿವಿಧೋದ್ದೇಶ ಧಾರ್ಮಿಕ ಕೇಂದ್ರದ ತಳಹದಿಯಲ್ಲಿ ‘ಹಿಡ್ಕಟ್ಟ್’ ಎಂಬ ಅಲಿಖಿತ ಸಂವಿಧಾನವನ್ನು ರೂಪಿಸಿ ಸಂಪ್ರದಾಯ ಬದ್ಧ ಆಚರಣೆಗಳ ಮೂಲಕ ಕೊಡವರ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾದ ಅಸ್ತಿತ್ವವನ್ನು ಪೀಳಿಗೆಯಿಂದ ಪೀಳಿಗೆಗೆ ಮುನ್ನಡೆಸಿಕೊಂಡು ಬಂದಿರುವುದಾಗಿದೆ ಎಂದು ವಿವರಿಸಿದರು.

ಸ್ಥಿತ್ಯಂತರದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ತಕ್ಕಾಮೆಯನ್ನು ಬಲಪಡಿಸುವುದರ ಮೂಲಕ ಕೊಡವಾಮೆಯನ್ನು ‘ಹಿಡ್ಕಟ್ಟ್’ ಎಂಬ ಸಂವಿದಾನದಡಿಯಲ್ಲಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮತ್ತೊಮ್ಮೆ ಗತವೈಭವದೊಂದಿಗೆ ಕೊಡವಾಮೆಯನ್ನು ಪುನರ್‌ಪ್ರತಿಷ್ಠಾಪಿಸುವ ಸಂಕಲ್ಪ ತೊಟ್ಟು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಮಾವೇಶದ ಮೂಲಕ ತಕ್ಕಾಮೆಯ ವ್ಯವಸ್ಥೆಯಲ್ಲಿ ಬರುವ ಕೊಡಗಿನ ಎಲ್ಲಾ ಸಾಂಪ್ರದಾಯಿಕ ಮಂದ್‌ಗೆ ಒಳಪಟ್ಟಿರುವಂತಹ ಪಾರಂಪರಿಕ ಊರ್‌ತಕ್ಕರು, ನಾಡ್‌ತಕ್ಕರು ಹಾಗು ಸೀಮೆತಕ್ಕರನ್ನು ಒಂದೇ ವೇದಿಕೆಯಡಿ ಸಮಾಗಮಗೊಳಿಸಿ ತಕ್ಕಾಮೆಯ ಮಹತ್ವ, ಇಂದಿನ ಸ್ಥಿತಿಗತಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತಂತೆ ಚರ್ಚಿಸಿ ಮುಂದಕ್ಕೆ ತಕ್ಕಾಮೆಯನ್ನು ಸಮರ್ಥವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ನಿಭಾಯಿಸಿಕೊಂಡು ಹೋಗುವುದರ ಕುರಿತಂತೆ ವಿಚಾರ ಮಂಡಿಸಲಾಗುವುದು. ಈ ಕುರಿತಂತೆ ಹಿರಿಯರ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದೊಂದಿಗೆ ಮುಂದಿನ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮದ್ರೀರ ಪ್ರಿನ್ಸ್ ಮುತ್ತಪ್ಪ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss