Tuesday, July 5, 2022

Latest Posts

ನಾಳೆ ಕೋವಿಡ್-19 ನಿಯಂತ್ರಣ ಸಿಎಂ ಬಿ.ಎಸ್ ವೈ ಸರ್ವಪಕ್ಷಗಳ ಸಭೆ: ಸಚಿವ ಶ್ರೀರಾಮುಲು

ಬಳ್ಳಾರಿ: ರಾಜ್ಯದಲ್ಲಿ ಕೊವೀಡ್ 19- ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಏ.19 ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಭಾಗಿಯಾಗಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.

ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಹಾಗೂ ದಾನಿಗಳಿಂದ 45ಸಾವಿರ‌ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಳ್ಳಾರಿಯಲ್ಲಿ 45 ಸಾವಿರ ಕುಟುಂಬಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ದಾನಿಗಳು ರೇಷನ್ ಮುಟ್ಟಿಸೋ ಕೆಲಸ ಮಾಡುತ್ತಿದ್ದಾರೆ.ದಾನಿಗಳಿಗೆ ಭಗವಂತ ಮತ್ತಷ್ಟು ಶಕ್ತಿ ಕೊಡಲಿ ಎಂದು ಬೇಡುವೆ ಎಂದರು.

ನಿನ್ನೆ ಮುಖ್ಯಮಂತ್ರಿಗಳು ಯಡಿಯೂರಪ್ಪ ನಮ್ಮ ಸಭೆ ಕರೆದು, ಮಾಹಿತಿ ಪಡೆದಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳನ್ನು ಎಬಿಸಿ ಅಂತ ವಿಂಗಡಣೆ ಮಾಡಲಾಗಿದೆ.

ಏಪ್ರಿಲ್ 20 ರ ನಂತರ ನಿಯಮ ಸಡಲಿಕೆಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಜನರು ಕೂಡ ಬಹಳ ದಿನಗಳಾಯ್ತು ಒಂದೇ ಕಡೆ ಇದ್ದಾರೆ. ಕೆಲವೆಡೆ ದಿನದಿಂದ ದಿನಕ್ಕೆ ಕೇಸ್ ಹೆಚ್ಚಾಗುತ್ತಿವೆ.ಜನರು ಕೂಡ ಸಹಕಾರ ಕೊಡಬೇಕು.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಆರೆಂಜ್ ಝೋನ್ ನಲ್ಲಿ‌ ಲಾಕ್ ಡೌನ್ ಸಡಲಿಕೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಬಳಿ ನಮ್ಮ ಸಲಹೆ ನೀಡಿದ್ದೇನೆ ಎಂದು ವಿವರಿಸಿದ ಅವರು ಹೊಸಪೇಟೆಯಲ್ಲಿ 11 ಪಾಸಿಟಿವ್ ಪ್ರಕರಣ ವಿಚಾರದ ಕುರಿತ ಸೀಲ್ ಡೌನ್ ಆದ ಪ್ರದೇಶಗಳು ಮಾತ್ರ ಕಟ್ಟುನಿಟ್ಟಾಗಿ ಮಾಡಿ, ಉಳಿದ ಕಡೆ ಸಡಲಿಕೆ ನೀಡೋದು ಒಳ್ಳೇಯದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss