spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಳೆ ನಡೆಯಲಿರುವ ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಸಕಲ ಸಿದ್ಧತೆ: ಪೋಷಕರಿಗೆ ಆತಂಕ ಬೇಡ :ಜಿ.ಪಂ.ಅಧ್ಯಕ್ಷ ದಿನಕರ ಬಾಬು

- Advertisement -Nitte

ಉಡುಪಿ: ನಾಳೆ (ಜೂ. 25)ಯಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಹಾಜರಾಗಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,526 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೊರ ಜಿಲ್ಲೆಯಿಂದ ಪರೀಕ್ಷೆ ಬರೆಯುವವರು 586, ಹೊರ ಜಿಲ್ಲೆಯಿಂದ ಇಲ್ಲಿ ಪರೀಕ್ಷೆ ಬರೆಯುವವರು 82 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳೂ-12520, ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳು 485, ಖಾಸಗಿ ವಿದ್ಯಾರ್ಥಿಗಳು 376, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು 145 ಇದ್ದಾರೆ.

ಯಾವುದೇ ಪರೀಕ್ಷಾ ಕೇಂದ್ರವು ಕಂಟೈನ್ಮೆಂಟ್ ವಲಯ ಎಂದು ಘೋಷಣೆಯಾದರೆ, ಬದಲಿ ಕೇಂದ್ರ ಗುರುತಿಸಲು ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದಲ್ಲಿ 2ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಒಟ್ಟು ಜಿಲ್ಲೆಯಲ್ಲಿ 10 ಹೆಚ್ಚುವರಿ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 82 ಬಸ್ಸುಗಳನ್ನು ಖಾಸಗಿ ಶಾಲೆಯಿಂದ ಪಡೆಯಲಾಗಿದೆ. ಈ ಬಸ್ಸುಗಳಿಗೆ ಇಂಧನ ವೆಚ್ಚವನ್ನು ಮಾತ್ರ ಇಲಾಖೆಯಿಂದ ಭರಿಸಲಾಗುತ್ತದೆ. ಈಗಾಗಲೇ ಪ್ರಸ್ತಾವನೆಯನ್ನು ಎಸ್‌ಎಸ್‌ಎಲ್‌ಸಿ ಮಂಡಳಿಗೆ ಕಳುಹಿಸಲಾಗಿದ್ದು, ಪ್ರತಿ ತಾಲೂಕಿನಲ್ಲಿ 5 ವಾಹನಗಳನ್ನು ಹೆಚ್ಚುವರಿಯಾಗಿ ತಹಶೀಲ್ದಾರರ ಹಂತದಲ್ಲಿ ಕಾಯ್ದಿರಿಸಲು ಕ್ರಮವಹಿಸಲಾಗಿದೆ. ಶಿಕ್ಷಣ ಇಲಾಖೆ ಹಂತದಲ್ಲೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಾಹನ ಹೊಂದಿರುವ ಚಾಲಕರನ್ನು ಗುರುತಿಸಿ ಆಪತ್ಕಾಲಕ್ಕೆ ಬಳಸಿಕೊಳ್ಳಲು ವ್ಯವಸ್ಥೆಗೊಳಿಸಲಾಗಿದೆ.

ಪ್ರತಿ ವಿದ್ಯಾರ್ಥಿಗಳನ್ನು ಶಾಲಾ ಹಂತದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾರಿಗೆ ವ್ಯವಸ್ಥೆ ಬಗ್ಗೆ ವಿಚಾರಿಸಲಾಗಿದ್ದು, ಅಗತ್ಯಬಿದ್ದವರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಇಂದು ಎಲ್ಲ ಸಿಬ್ಬಂದಿ ಕೇಂದ್ರಕ್ಕೆ ಆಗಮಿಸಲು ಸೂಚಿಸಿದೆ. ಪರೀಕ್ಷೆಯ ಎಲ್ಲ ಮಾಹಿತಿಯನ್ನು ಸುರಕ್ಷತೆ, ವ್ಯಕ್ತಿಗತ ಅಂತರ, ಆರೋಗ್ಯ ತಪಾಸಣೆದ ಬಗ್ಗೆ ಕೇಂದ್ರ ಸಿಬ್ಬಂದಿಗೆ ಮಾಹಿತಿ ನೀಡಲು ಕ್ರಮವಹಿಸಲಾಗಿದೆ. ಆರೋಗ್ಯ ಸಿಬ್ಬಂದಿ ಕೂಡ ಕೇಂದ್ರದಲ್ಲಿ ಹಾಜರಿರಲು ಸೂಚಿಸಿದೆ. ವಿದ್ಯಾರ್ಥಿಗಳೂ ಕೇಂದ್ರಕ್ಕೆ ಬಂದು ಅವರ ಕೊಠಡಿ/ಆಸನಗಳನ್ನು ಮುಂಚಿತವಾಗಿ ಬಂದು ತಿಳಿಯಲು ಅವಕಾಶ ಕಲ್ಪಿಸಲಾಗಿದೆ.

144 ಸೆಕ್ಷನ್ ಜಾರಿ ಹಾಗೂ ಝೇರಾಕ್ಸ್ ಅಂಗಡಿ ಮುಚ್ಚುವ ಬಗ್ಗೆ ಕ್ರಮವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲು ಗ್ರಾ.ಪಂ. / ನಗರ ಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು 4 ಸಾಲುಗಳಲ್ಲಿ ಬರಲು ಪರೀಕ್ಷಾ ಕೇಂದ್ರಗಳಲ್ಲಿ ಗುರುತು ಹಾಕಲು ಕ್ರಮವಹಿಸಲಾಗಿದೆ. ಆರೋಗ್ಯ ತಪಾಸಣೆಯು ಸಾಲಲ್ಲಿ ಆಗಲಿದೆ. ಪ್ರತೀ 200 ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕ್ಯಾನರ್ ಗನ್ ಕೇಂದ್ರಗಳಿಗೆ ಬಂದಿದೆ. ಇಬ್ಬರು ಆರೋಗ್ಯ ಕಾರ್ಯಕರ್ತರೂ ಪರೀಕ್ಷಾ ಕರ್ತವ್ಯದಲ್ಲಿರುವುದರಿಂದ ಅವರೂ ಥರ್ಮಲ್ ಗನ್ ತರಲು ಸೂಚಿಸಿದೆ.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ರವಾನೆ, ಉತ್ತರ ಪತ್ರಿಕೆ ದಾಸ್ತಾನು ಕೊಠಡಿಗಳಿಗೆ ಭದ್ರತೆ ವಹಿಸುವ ಬಗ್ಗೆ ಪೊಲೀಸ್ ಇಲಾಖೆ ಕ್ರಮವಹಿಸಿದೆ. ಪರೀಕ್ಷಾ ದಿನ ಅವ್ಯವಹಾರ ತಡೆಗಟ್ಟಲು ಸ್ಥಾನಿಕ ಜಾಗೃತ ದಳ, ಅನ್ಯ ಇಲಾಖಾ ಅಧಿಕಾರಿಗಳ ನಿಯೋಜನೆ, ಉಪನಿರ್ದೇಶಕರ ನೇತೃತ್ವದಲ್ಲಿ 2 ಜಾಗೃತ ದಳ, ಡಯಟ್‌ನ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ.

ಎಲ್ಲ 51 ಕೇಂದ್ರಗಳ ಪರಿಶೀಲನೆ ಆಗಿ, 4 ಬಾರಿ ಕೇಂದ್ರ ಮುಖ್ಯಸ್ಥರ ಹಾಗೂ ಪ್ರೌಢಶಾಲಾ ಮುಖ್ಯಸ್ಥರ ಸಭೆ, ಸಾರಿಗೆ ವ್ಯವಸ್ಥೆ, ಸುರಕ್ಷತೆ, ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್, ಪೋಷಕರ ನಿಯಂತ್ರಣ, ಪ್ರತಿಯೊಬ್ಬರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೂ ಹಾಗೂ ಪ್ರತಿ ಪ್ರೌಢಶಾಲೆಗಳಿಗೂ ಚೆಕ್ ಲಿಸ್ಟ್ ನೀಡಿ ವ್ಯವಸ್ಥೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ದಿನಕರ ಬಾಬು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss