Tuesday, August 9, 2022

Latest Posts

ನಾಳೆ ಬೆಂಗಳೂರಿನ 8 ಕಡೆಗಳಲ್ಲಿ ನಡೆಯಲಿದೆ ಕೋವಿಡ್ ವ್ಯಾಕ್ಸಿನ್ ಡ್ರೈ ರನ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ಬೆಂಗಳೂರು ನಗರದ ಎಂಟು ವಲಯಗಳ ಎಂಟು ಆಸ್ಪತ್ರೆಗಳಲ್ಲಿ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ, 8 ಕಡೆಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ. ಪಿಹೆಚ್‌ಸಿ, ರೆಫೆರಲ್, ಸಿಹೆಚ್‌ಸಿಯಲ್ಲಿ ಆಸ್ಪತ್ರೆಯಲ್ಲಿ ನಡೆಯಲಿದೆ. ಇನ್ನು ಈ ಬಾರಿ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೂ ಡ್ರೈ ರನ್ ನಡೆಸಲಾಗುವುದು ಎಂದರು.
ಕಳೆದ ಬಾರಿ ಆಗಿದ್ದ ಟೆಕ್ನಿಕಲ್ ಸಮಸ್ಯೆಗಳನ್ನು ಈ ಬಾರಿ ಪರಿಹರಿಸಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಆಗುವುದು ಸಮಸ್ಯೆ ಆಗುತ್ತಿರುವ ಹಿನ್ನೆಲೆ, ಬೇರೆ ಐಡಿ ಕಾರ್ಡ್ ಗಳನ್ನು ಬಳಸಲು ತಿಳಿಸಲಾಗಿದೆ. ಒಂದು ಲಸಿಕಾ ಸ್ಥಳದಲ್ಲಿ 25 ಜನರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೊಮ್ಮನಹಳ್ಳಿ ವಲಯ – ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
ದಾಸರಹಳ್ಳಿ ವಲಯ – ಸಪ್ತಗಿರಿ ಮೆಡಿಕಲ್ ಕಾಲೇಜು
ಈಸ್ಟ್ ವಲಯ – ಹಲಸೂರು ರೆಫೆರಲ್ ಆಸ್ಪತ್ರೆ
ಮಹದೇವಪುರ ವಲಯ – ಕೆ.ಆರ್.ಪುರಂ ಜನರಲ್ ಆಸ್ಪತ್ರೆ
ಆರ್.ಆರ್.ನಗರ – ಕೆಂಗೇರಿ ಪಿಹೆಚ್‌ಸಿ
ಸೌಥ್ ವಲಯ – ಕಿಮ್ಸ್ ಆಸ್ಪತ್ರೆ
ವೆಸ್ಟ್ ವಲಯ – ಬಿಎಂಸಿ
ಯಲಹಂಕ ವಲಯ – ಆಸ್ಟ್ರೋ ಸಿಎಂಐ ಆಸ್ಪತ್ರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss