Sunday, July 3, 2022

Latest Posts

ನಾಳೆ ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಜನ್ಮ ಶತಮಾನೋತ್ಸವ: 100 ರೂ. ನಾಣ್ಯ ಬಿಡುಗಡೆ ಮಾಡಲಿರುವ ಪ್ರಧಾನಿ

ಹೊಸದಿಲ್ಲಿ: ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ನಾಳೆ(ಅ.12) ವಿಶೇಷ 100 ರೂ. ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.
ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಜನ್ಮಶತಮಾನೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಸಚಿವಾಲಯ ಹೊರತಂದಿರುವ ಈ ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.
ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರ ಭಾವಚಿತ್ರವುಳ್ಳ ಈ 100 ರೂ. ನಾಣ್ಯವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss