Friday, July 1, 2022

Latest Posts

ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು, ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿರುವುದು ಖೇದಕರ

ಮೈಸೂರು: ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ ಇವರು ಕಾಣದಾಗುವುದು ನಮ್ಮ ದುರ್ದೈವ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.
ಶನಿವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕೊಡಗಿನ ಸ್ವಾತಂತ್ರ÷್ಯ ಸೇನಾನಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೮೫೭ ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ. ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು, ಸ್ವದೇಶವನ್ನು ರಕ್ಷಿಸಲು ಮಹಾ ಸ್ವಾತಂತ್ರ÷್ಯ ಸಂಗ್ರಾಮವೊoದು ನಡೆದ ವರ್ಷ. ಇದನ್ನು ಆಂಗ್ಲರು `ದಂಗೆ’ ಎಂದರು. ಅದು ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್ ಪಾಂಡೆ,ತಾAತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ `ಸಿಪಾಯಿ ದಂಗೆ’ಯನ್ನು ಮೊದಲ ಸ್ವಾತಂತ್ರ÷್ಯ ಸಂಗ್ರಾಮ ಅನ್ನುವುದಕ್ಕೂ ಮೊದಲು ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು.
ಇಂದು ಅಕ್ಟೋಬರ್ ೩೧ ಕೊಡಗಿನ ನಾಯಕ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು ಹುತಾತ್ಮರ ದಿನವೆಂದು ಸರ್ಕಾರ ಆಚರಿಸಲಿ. ಸ್ವಾತಂತ್ರ ಕೇವಲ ಸಂಗತಿಯಲ್ಲ. ಅದರ ಹಿಂದೆ ಹಲವರ ಬಲಿದಾನವಿದೆ ಎಂಬುದನ್ನು ನಮ್ಮ ಯುವ ಪೀಳಿಗೆ ಅರಿಯಲೇ ಬೇಕಾದ ಪರಮ ಸತ್ಯವೆಂದರೆ, ನಮ್ಮವರೇ ಎಂದು ಪರಿಭಾವಿಸುವ ನಮ್ಮವರು, ಹಲವು ಕಡೆ ನಮ್ಮವರಿಗೆ ಬೆನ್ನಿಗೆ ಚೂರಿ ಹಾಕಿದ್ದು ಎಂದರು.
ಸುಮಾರು ೧೮೩ ವರ್ಷಗಳ ಹಿಂದೆಯೇ ಸ್ವಾತಂತ್ರದ ಕನಸು ಕಂಡ ಆ ಚೇತನವನ್ನು ನೆನೆದರೆ ನಿಜಕ್ಕೂ ನನಗೆ ಭಾವುಕತೆ ಆವರಿಸುತ್ತದೆ. ಅದು ನನ್ನ ನಾಡ ಮಣ್ಣಿನ ಮಗ ಈ ಹೋರಾಟವನ್ನು ರೂಪಿಸಿದ್ದು. ನಿಜಕ್ಕೂ ನಾವೆಲ್ಲಾ ಹೆಮ್ಮೆ ಪಡುವ ಸಂಗತಿ. ದಂಗೆಯ ಫಲಿತಾಂಶ ಸಫಲವೊ, ವಿಫಲವೊ ಏನು ಚರ್ಚೆಗೆ ಅರ್ಹವಲ್ಲ. ಆದರೆ ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಆದದ್ದು, ಈ ನಾಡಿಗೆ ಸಂದ ಗೌರವ. ಎಲ್ಲಿಯೋ ದೂರದ ದಂಗೆಗಳ ನೆನೆಯುವ ನಾವು, ನಮ್ಮ ರಾಜ್ಯದಲ್ಲಿ ನಡೆದ, ನಮ್ಮವರು ಮಾಡಿದ ಪ್ರಥಮ ಸ್ವಾತಂತ್ರ ದಂಗೆಯ ಬಗ್ಗೆ ಅರಿಯುವ ಮನಸ್ಸು ಮಾಡದಿರುವುದು ಅಪರಾಧವೆನಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಪ್ಪಯ್ಯಗೌಡರ ಪ್ರತಿಭೆಯನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಸ್ಥಾಪಿಸಬೇಕು. ಮರೆಯಾದ ಇತಿಹಾಸದ ಅಧ್ಯಯನ ಮಾಡಲು ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ ಆ ಮೂಲಕ ಪ್ರಥಮ ಸಂಗ್ರಾಮವೆನಿಸಿದ ಈ ದಂಗೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕೆoದು ಆಗ್ರಹಿಸಿದರು.
ಮುಖಂಡರಾದ ಕೆ. ಹರೀಶ್ ಗೌಡ, ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ರವಿ ಎ., ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ರವಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗುರರಾಜ್, ದಂತ ವೈದ್ಯ ಲೋಕೇಶ್, ಉದ್ಯಮಿ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss