Saturday, July 2, 2022

Latest Posts

ನಿಂಬೆಹಣ್ಣು ಉಪಯೋಗಿಸಿ ಸಿಪ್ಪೆ ಬಿಸಾಡುತ್ತೀರಾ? ಹಾಗಾದರೆ ನೀವು ತಪ್ಪದೇ ಇದನ್ನು ಓದಬೇಕು…

ನಮಗೆ ನಿತ್ಯದ ಅಡುಗೆಗೆ ನಿಂಬೆ ಹಣ್ಣು ಬೇಕೆ ಬೇಕು. ಆದರೆ ನಿಂಬೆಹಣ್ಣು ಉಪಯೋಗಿಸಿ ಸಿಪ್ಪೆಯನ್ನು ಎಸೆಯುತ್ತೇವೆ. ನಿಂಬೆ ಹಣ್ಣಿನ ಸಿಪ್ಪೆಯಿಂದ ಎಷ್ಟೊಂದು ಲಾಭವಿದೆ ಗೊತ್ತಾ? ನೀವು ಇದರ ಉಪಯೋಗ ಗೊತ್ತಾದರೆ ಇನ್ನೆಂದಿಗೂ ನಿಂಬೆಹಣ್ಣಿನ ಸಿಪ್ಪೆ ಎಸೆಯುವುದಿಲ್ಲ.  ಇಲ್ಲಿದೆ ನಿಂಬೆಹಣ್ಣಿನ ಸಿಪ್ಪೆಯ ಉಪಯೋಗ….

ಕ್ಯಾನ್ಸರ್ ವಿರುದ್ಧ ಹೋರಟ:
ನಿಂಬೆಹಣ್ಣಿನ ಸಿಪ್ಪೆಯಲ್ಲಿ ಫೈಬರ್ ಮತ್ತು ವಿಟಮಿನ್ ಎ ಇರುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿಮಾಡಿಕೊಂಡು ಜೇನುತುಪ್ಪದೊಂದಿಗೆ ಸೇವಿಸಿದರೆ ಒಳ್ಳೆಯದು.

ಎಣ್ಣೆ ಪಾತ್ರೆ:
ಜಿಡ್ಡು ಪಾತ್ರೆ, ಎಣ್ಣೆ ಪಾತ್ರೆಯನ್ನು ಎಷ್ಟೇ ತೊಳೆದರೂ ಎಣ್ಣೆ ಅಂಶ ಹೋಗುವುದಿಲ್ಲ. ಆಗ ನಿಂಬೆಹಣ್ಣಿನ ಸಿಪ್ಪೆಯಿಂದ ಜಿಡ್ಡು ಪಾತ್ರೆ ತಿಕ್ಕಿದರೆ ಜಿಡ್ಡು ಸರಾಗವಾಗಿ ಹೋಗುತ್ತದೆ.

ಬಟ್ಟೆ ಕಲೆ:
ಬಟ್ಟೆ ಕೊಳೆಯಾಗಿದ್ದರೆ, ಚಿಕ್ಕ-ಪುಟ್ಟ ಕಲೆಗಳಾಗಿದ್ದರೆ ನಿಂಬೆಹಣ್ಣಿನ ಸಿಪ್ಪೆಯನ್ನು ಕಲೆಯಾದ ಜಾಗದಲ್ಲಿ ಹಾಕಿ ತಿಕ್ಕಿದರೆ ಕಲೆ ಹೋಗುತ್ತದೆ. ಬಟ್ಟೆ ನೆನೆಸುವಾಗ ನಿಂಬೆಹಣ್ಣಿನ ಸಿಪ್ಪೆಯನ್ನು ಜೊತೆಗೆ ಹಾಕಿ ನನೆಸಿದರೆ ಬಟ್ಟೆ ಕಲೆ ನಿವಾರಣೆಯಾಗುತ್ತದೆ.

ಮೊಡವೆ:
ಮುಖದ ಮೇಲಿನ ಮೊಡವೆಗಳನ್ನು ನಿಂಬೆಹಣ್ಣಿನ ಸಿಪ್ಪೆ ದೂರಮಾಡುತ್ತದೆ. ಮೊಡವೆಗಳಾದಲ್ಲಿ ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಬೇಕು. ಹೀಗೆ ಮಾಡಿದರೆ ಮೊಡವೆ ಹೋಗುತ್ತದೆ.

ತಾಮ್ರದ ಪಾತ್ರೆ:
ತಾಮ್ರದ ಪಾತ್ರೆಯನ್ನು ಸಾಬೂನಿನಿಂದ ತೊಳೆದರೆ ಹೊಳಪು ಬರುವುದಿಲ್ಲ. ನಿಂಬೆಹಣ್ಣಿನ ಸಿಪ್ಪೆಯಿಂದ ತೊಳೆದರೆ ಚೆನ್ನಾಗಿ ಹೊಳಪು ಬರುತ್ತದೆ.

ಕೈ ಕ್ಲೀನ್:
ಈರುಳ್ಳಿ, ಬದನೆಕಾಯಿ ಹೆಚ್ಚಿದರೆ ಕೈ ಕಪ್ಪಾಗುತ್ತದೆ. ಮತ್ತು ಕೆಲವೊಮ್ಮೆ ಅಡುಗೆ ಮಾಡುವಾಗ ಕೈಗೆ ಎಣ್ಣೆ ತಾಗಿರುತ್ತದೆ. ಆಗ ನಿಂಬೆಹಣ್ಣಿನ ಸಿಪ್ಪೆಯಿಂದ ಕೈ ತೊಳೆಯಬೇಕು. ಕೈ ಕ್ಲೀನ್ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss