Wednesday, August 10, 2022

Latest Posts

ನಿಗದಿಯಂತೆಯೇ ನಡೆಯಲಿದೆ ನೀಟ್, ಜೆಇಇ ಪರೀಕ್ಷೆ | ಸೆ.1ರಿಂದ ಪರೀಕ್ಷೆ

ಹೊಸದಿಲ್ಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೀಟ್) ಹಾಗೂ ಜೆಇಇ ಪರೀಕ್ಷೆ ಮುಂದೂಡುವಂತೆ ಹಲವು ರಾಜ್ಯ ಸರ್ಕಾರಗಳು ಒತ್ತಾಯಿಸಿದರೂ ನಿಗದಿಯಂತೆಯೇ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ತಿಳಿಸಿದೆ.

ಜೆಇಇ  ಸೆಪ್ಟೆಂಬರ್ 1ರಿಂದ 6ರತನಕ ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಿಂದ ಪ್ರಾರಂಭವಾಗಲಿದೆ. ಪ್ರವೇಶ ಪತ್ರವನ್ನು ಈಗಾಗಲೇ ಶೇ.85 ಜೆಇಇ ವಿದ್ಯಾರ್ಥಿಗಳು ಹಾಗೂ ಶೇ.99 ನೀಟ್ ವಿದ್ಯಾರ್ಥಿಗಳು ಸೇರಿ ಒಟ್ಟು 7.30ಲಕ್ಷ  ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಂಡಿದ್ದು, 320 ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮನವಿ ಸಲ್ಲಿಸಿದ್ದಾರೆ ಎಂದು ಎನ್ ಟಿ ಎ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss