Thursday, July 7, 2022

Latest Posts

ನಿಜವಾಗುತ್ತಾ ಬಲ್ಗೇರಿಯನ್‌ನ ನಿಗೂಢ ಮಹಿಳೆ ನುಡಿದಿದ್ದ 2021ರ ಆ ಭವಿಷ್ಯ?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಲ್ಗೇರಿಯನ್‌ನ ನಿಗೂಢ ಮಹಿಳೆ ಯಾರಿಗೆ ಗೊತ್ತಿಲ್ಲ ಹೇಳಿ!
ಬಾಲ್ಯದಿಂದಲೂ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡು 1996ರಲ್ಲಿಯೇ ಸ್ತನ ಕ್ಯಾನ್ಸರ್‌ಗೆ ಬಲಿಯಾದ ಬಾಬಾ ವಂಗಾ ಎಂಬ ಹೆಸರಿನ ಈ ಮಹಿಳೆ ನುಡಿದಿರುವ ಭವಿಷ್ಯ ವಿಶ್ವಪ್ರಸಿದ್ಧ. ಈಕೆ ಸಾಯುವ ಮುನ್ನ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡುಕೊಂಡಿದ್ದಾಗಿ ಹೇಳಿಕೊಂಡಿದ್ದರು. ವಂಗಾ ಹೇಳಿರುವ 2021 ಇಸವಿಯ ಭವಿಷ್ಯ ಹೇಗಿದೆ? ಇಲ್ಲಿದೆ ಓದಿ,
2021ರಲ್ಲಿ ಜಗತ್ತಿನಲ್ಲಿ  ಬಹಳಷ್ಟು ದುರಂತಗಳು, ದೊಡ್ಡ ಅನಾಹುತಗಳು ಘಟಿಸಲಿದೆ. ಈ ವರ್ಷದಲ್ಲಿ  ಜನರ ಮಾನಸಿಕತೆ ಬದಲಾಗುತ್ತದೆ. ಕಷ್ಟದ ಸಮಯಗಳನ್ನು ಎದುರಿಸುತ್ತಾ ಜನರು ತಮ್ಮ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಮಾನವೀಯತೆ, ಹಣೆಯ ಬರಹ ಬದಲಿಸುವ ವಿನಾಶಕಾರಿ ಘಟನೆಗಳಿಗೆ ಮನುಷ್ಯ ಸಾಕ್ಷಿಯಾಗಲಿದ್ದಾನೆ. ಈ ವರ್ಷದಲ್ಲಿ ಡ್ರ್ಯಾಗನ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಬಲವಾದ ಡ್ರ್ಯಾಗನ್ ಮಾನವೀಯತೆಯನ್ನು ವಶಪಡಿಸಿಕೊಳ್ಳುತ್ತದೆ. ಮೂವರು ದೈತ್ಯರು ಒಂದಾಗುತ್ತಾರೆ. ಕೆಲವು ಜನರಲ್ಲಿ ಕೆಂಪು ಹಣ ಇರುತ್ತದೆ ಎಂದು ಬಾಬಾ ವಂಗಾ ಸಾಯುವ ಮುನ್ನ ಈ ವಿಲಕ್ಷಣ ಹೇಳಿಕೆ ನೀಡಿದ್ದಾರೆ.
ಇದಲ್ಲದೆ ವಂಗಾ ಒಂದು ಶುಭ ಸುದ್ದಿಯನ್ನೂ ಹೇಳಿದ್ದರು. ಈ ವರ್ಷದಲ್ಲಿ ಮಹಾಮಾರಿ ಕ್ಯಾನ್ಸರ್‌ಗೆ ಔಷಧ ಸಿಗಲಿದೆ. ಕ್ಯಾನ್ಸರ್‌ನ್ನು ಜನರು ಕಬ್ಬಿಣದ ಸರಳಿನಲ್ಲಿ ಕಟ್ಟಿ ಹಾಕಲಿದ್ದಾರೆ ಎಂದಿದ್ದಾರೆ ವಾಂಗಾ.
ಅಂದಹಾಗೆ ಈಕೆ 2001ರ ನವೆಂಬರ್ 9ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಯುತ್ತದೆ ಎಂದೂ ಹೇಳಿದ್ದರು. ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ ಎಂದು ಆಕೆ ಈ ಘಟನೆಯನ್ನು 1989ರಲ್ಲಿ ಹೇಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss