ಹೊಸದಿಲ್ಲಿ: ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 20 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ ಕೊರೊನಾ ಸೋಂಕಿತರಲ್ಲಿ 330 ಮಂದಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಭಾಗಿಯಾದವರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜಧಾನಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಹೊಸದಾಗಿ ದಾಖಲಾಗಿರುವ 20 ಪ್ರಕರಣಗಳಲ್ಲಿ 10 ಮಂದಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ಭಾಗಿಯಾದವರು ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕನ್ನು ತಡೆಯಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 5T plan ಪ್ರಾರಂಭಿಸಲಿದ್ದಾರೆ Testing (ಪರೀಕ್ಷೆ), Tracing (ಪತ್ತೆಹಚ್ಚುವುದು), Treatment (ಚಿಕಿತ್ಸೆ), Teamwork (ತಂಡದ ಕೆಲಸ), Tracking/ Monitoring ( ನಿಗಾವಹಿಸುವುದು) ಎಂದು ಎ.ಎನ್.ಐ ವರದಿ ತಿಳಿಸಿದೆ.