Monday, August 15, 2022

Latest Posts

ನಿತ್ಯ ಅಂಜೂರ ಸೇವಿಸುತ್ತೀರಾ? ಹಾಗಾದರೆ ಈ ಸಮಸ್ಯೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ!

ಅಂಜೂರ ತಿನ್ನುವುದಕ್ಕೆ ಒಗರು ಒಗರು ಎನಿಸಿದರೂ ಇದರಲ್ಲಿರುವ ಕಬ್ಬಿಣಾಂಶ, ರಂಜಕ , ವಿಟಮಿನ್ ಎ, ಸಿ, ಬಿ, ಈ ಹಣ್ಣಿನಲ್ಲಿ ಹೇರಳವಾಗಿ ಇರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಂಜೂರ ಬೇಗನೇ ಹಾಳಾಗುವುದಿಲ್ಲ ಬಹಳ ದಿನದವರೆಗೂ ಇರುತ್ತದೆ. ವಿಶ್ವದೆಲ್ಲೆಡೆ ಒಣಹಣ್ಣಿನ ರೂಪದಲ್ಲಿ ಮಾರಾಟವಾಗುತ್ತದೆ. ಅಂಜೂರವನ್ನು ಹೆಚ್ಚಾಗಿ ಬೇಕರಿಗಳಲ್ಲಿ ಬಳಸುತ್ತಾರೆ. ಕೇಕ್, ಚಾಕಲೇಟ್ಸ್, ಐಸ್ ಕ್ರೀಮ್ ಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇಲ್ಲಿದೆ ಅಂಜೂರದ ಆರೋಗ್ಯಕರ ಉಪಯೋಗ…

  • ಅಂಜೂರದಲ್ಲಿ ಇರುವಂತಹ ಮೆಗ್ನಿಷಿಯಂ, ಮ್ಯಾಗ್ನಿನೀಸ್, ಜಿಂಕ್, ಖನಿಜಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುತ್ತದೆ. ಸಂತಾನ ವೈಫಲ್ಯದಿಂದ ಬಳಲುತ್ತಿರುವವರು ಅಂಜೂರವನ್ನು ನಿಯಮಿತವಾಗಿ ಸೇವಿಸ ಬೇಕು.
  • ಹೈ ಬಿಪಿ ಸಮಸ್ಯೆ ಇರುವವರು ದಿನವೂ ತಪ್ಪದೇ ಒಂದು ಅಂಜೂರವನ್ನು ಸೇವಿಸ ಬೇಕು. ಏಕೆಂದರೆ ಅಂಜೂರದಲ್ಲಿ ಪೋಟಾಷಿಯಂ, ಸೋಡಿಯಂ ಪ್ರಮಾಣ ಇರುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಸಿ ಅಂಜೂರವನ್ನೂ ಸೇವಿಸಬಹುದು. ಒಣಗಿದ ಅಂಜೂರವನ್ನೂ ಸೇವಿಸಬಹುದು.
  • ಜೀರ್ಣಕ್ರೀಯೆ ಸರಿ ಇಲ್ಲದಿರುವವರು ಅಂಜೂರವನ್ನು ಸೇವಿಸಬೇಕು. ಏಕೆಂದರೆ ಅಂಜೂರದಲ್ಲಿ ನಾರಿನ ಪದಾರ್ಥಗಳಿರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
  • ಅಸ್ತಮಾ ಸಮಸ್ಯೆ ಇರುವವರು, ಕಫದ ಸಮಸ್ಯೆ ಇರುವವರು ಅಂಜೂರವನ್ನು ತಿನ್ನುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಏಕೆಂದರೆ ಅಂಜೂರದಲ್ಲಿ ಕಫ ಕರಗಿಸುವ ಶಕ್ತಿ ಇದೆ.
  • ಮಲಬದ್ಧತೆ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಅಂಜೂರವನ್ನು ಸೇವಿಸಬೇಕು. ಅಂಜೂರದ ಬೀಜಗಳು ಗುದದ್ವಾರವನ್ನು ಸ್ವಚ್ಛಗೊಳಿಸುತ್ತವೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಅಂಜೂರದ ಒಣ ತುಂಡುಗಳನ್ನು ರಾತ್ರಿ ಹಾಲಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss