Saturday, August 13, 2022

Latest Posts

ನಿತ್ಯ ಒಂದು ಲೋಟವಾದರೂ ಹಾಲು ಕುಡಿಯುತ್ತೀರಾ? ಒಂದು ಲೋಟ ಹಾಲಿನಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತೇ? ಹಾಲಿನಿ ಹೆಲ್ತ್ ಬೆನಿಫಿಟ್ಸ್ ಇಲ್ಲಿದೆ..

ಪ್ರತಿದಿನ ಒಂದುಲೋಟ ಹಾಲು ಕುಡಿಯಿರಿ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕಾಫಿ,ಟೀ ಕುಡಿಯುತ್ತೀವಲ್ಲ ಎಂದು ಸುಮ್ಮನಾಗುತ್ತೇವೆ. ಆದರೆ ಬರೀ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಏನೆಲ್ಲಾ ಳಾಭಗಳಿವೆ ಗೊತ್ತೇ? ಬರೀ ಮಕ್ಕಳು ಮಾತ್ರ ಹಾಲು ಕುಡಿಯಬೇಕು ಎಂದಲ್ಲಾ, ಪ್ರತಿಯೊಬ್ಬರೂ ಹಾಲು ಕುಡಿಯಬೇಕು.. ಏಕೆ ಎನ್ನುತ್ತೀರಾ? ಇಲ್ಲಿ ಕೇಳಿ…

  • ಸುಸ್ತಾದರೆ ಹಾಲು ಕುಡಿಯಿರಿ: ದಿನವೂ ಬೇಗ ಸುಸ್ತಾಗುತ್ತದೆ, ಏನು ತಿಂದರೂ ಎನರ್ಜಿ ಆಗುವುದೇ ಇಲ್ಲ ಎಂದರೆ ದಿನವೂ ಬೆಳಗ್ಗೆ ಒಂದು ಲೋಟ ಹಾಲು ಕುಡಿಯಿರಿ. ಆಗ ಎನರ್ಜಿ ಇರುತ್ತದೆ.
  • ಅಸಿಡಿಟಿ: ಪ್ರತಿದಿನ ಒಂದು ಲೋಟ ತಣ್ಣಗಿನ ಹಾಲು ಕುಡಿದರೆ ಅಸಿಡಿಟಿ ಕಮ್ಮಿಯಾಗುತ್ತದೆ. ಗ್ಯಾಸ್ ತೊಂದರೆಯಿಂದ ಬೇಸತ್ತು ಏನೆಲ್ಲಾ ಮಾಡಿದವರು ಇದನ್ನೊಮ್ಮೆ ಟ್ರೈ ಮಾಡಿ.
  • ತೂಕ ಇಳಿಕೆ: ದಿನಾ ಹಾಲು ಕುಡಿದರೆ ಎಲ್ಲಿ ದಪ್ಪ ಆಗುತ್ತೀನೋ ಎಂದು ಹಾಲು ಕುಡಿಯದೇ ಇರಬೇಡಿ. ಇದರಲ್ಲಿರುವ ಕಾಂಜುಗೇಟೆಡ್ ಲಿನೋಲಿಕ್ ಆಸಿಡ್ ನಿಮ್ಮ ತೂಕ ಇಳಿಕೆಯಾಗುತ್ತದೆ. ತೂಕ ಇಳಿಕೆಗೂ ಹಾಲು ಮುಖ್ಯವಾಗುತ್ತದೆ.
  • ಆರೋಗ್ಯನಿರೋಧಕ ಶಕ್ತಿ: ಆರೋಗ್ಯನಿರೋಧಕ ಶಕ್ತಿ ಹೆಚ್ಚಲು ಏನೆಲ್ಲಾ ಮಾಡುತ್ತಿದ್ದೀರಿ, ಆದರೆ ಈಗಾಗಲೇ ನಿತ್ಯ ಒಂದು ಲೋಟ ಹಾಲು ಕುಡಿಯುವವರಿಗೆ ಇಮ್ಯುನಿಟಿ ಬಗ್ಗೆ ಯೋಚಿಸುವ ಚಿಂತೆಯೇ ಇಲ್ಲ.
  • ಆಹಾರ ಎನರ್ಜಿ: ಹಾಲಿನಲ್ಲಿರುವ ವಿಟಮಿನ್ ಬಿ.೧೨ ನಮ್ಮ ನರ್ವಸ್ ಸಿಸ್ಟಮ್‌ನನ್ನು ರಕ್ಷಿಸುತ್ತದೆ. ಅಲ್ಲದೆ ನಾವು ತಿನ್ನುವ ಆಹಾರವನ್ನು ಎನರ್ಜಿಯಾಗಿ ಕನ್ವರ್ಟ್ ಮಾಡುವ ಗುಣ ಹಾಲಿನಲ್ಲಿದೆ.
  • ಕ್ಯಾಲ್ಷಿಯಂ: ಕ್ಯಾಲ್ಷಿಯಂ ಹಾಲಿನಲ್ಲಿರುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ. ವಯಸ್ಸಾದಂತೆ ಮೂಳೆಗಳು ಕಡಿಮೆ ಸ್ಟ್ರಾಂಗ್ ಆಗುತ್ತದೆ. ಸಣ್ಣ ಪುಟ್ಟ ನೋವುಗಳು ಬರುತ್ತಲೇ ಇರುತ್ತವೆ. ಅದನ್ನೆಲ್ಲ ತಡೆಗಟ್ಟಲು ಹಾಲು ಸೇವನೆ ಮುಖ್ಯ.
  • ವಿಟಮಿನ್ ಎ: ಇದರಲ್ಲಿರುವ ವಿಟಮಿನ್ ಎ ದೇಹದ ಆರೋಗ್ಯಕ್ಕೆ ಸಹಕಾರಿ. ಇಮ್ಯೂನ್ ಸಿಸ್ಟಮ್ ಚೆನ್ನಾಗಿ ಇಡುವುದರಲ್ಲಿ ಹಾಲಿನ ಪಾತ್ರ ಹೆಚ್ಚಿದೆ. ಇನ್ನು ನಮ್ಮ ಸ್ಕಿನ್ ಚೆನ್ನಾಗಿರಲಿ, ಯಂಗ್ ಆಗಿ ಕಾಣಬೇಕು ಎಂದರೆ ದಿನವೂ ಹಾಲು ಕುಡಿಯಿರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss