Thursday, July 7, 2022

Latest Posts

ನಿತ್ಯ ತುಪ್ಪವನ್ನು ಸೇವಿಸುತ್ತೀರಾ? ಇಲ್ಲಿದೆ ತುಪ್ಪದ ಆರೋಗ್ಯಕರ ಪ್ರಯೋಜನಗಳು

ಭಾರತೀಯರು ಹೆಚ್ಚಾಗಿ ತುಪ್ಪ ಪ್ರಿಯರು. ತುಪ್ಪವನ್ನು ಹೆಚ್ಚಾಗಿ ಪ್ರತಿಯೊಂದು ಖಾದ್ಯಕ್ಕೂ ಬಳಸುತ್ತಾರೆ. ತುಪ್ಪವನ್ನು ಆಹಾರದೊಂದಿಗೆ ಸೇವಿಸುವುದರಿಂದ ತುಪ್ಪದ ರುಚಿಯೂ ಹೆಚ್ಚುತ್ತದೆ. ಆರೋಗ್ಯಕರವಾಗಿಯೂ ಇದು ಒಳ್ಳೆಯದು. ದಿನ ನಿತ್ಯ ಒಂದು ಚಮಚ ತುಪ್ಪ ಸೇವಿಸುವುದರಿಂದ ಕೊಬ್ಬು ಹೆಚ್ಚುವುದಿಲ್ಲ. ಬದಲಾಗಿ ಆರೋಗ್ಯಕರವಾಗಿ ಸುಧಾರಿಸುತ್ತದೆ. ಇಲ್ಲಿದೆ ತುಪ್ಪದ ಆರೋಗ್ಯಕರ ಉಪಯೋಗ..

  • ತುಪ್ಪದಲ್ಲಿ ಎ,ಇ,ಡಿ,ಕೆ ಯಂತಹ ವಿಟಮಿನ್ ಅಂಶಗಳು ಹೆಚ್ಚುತ್ತದೆ.  ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೊಡುತ್ತವೆ. ಆರೋಗ್ಯ ವೃದ್ಧಿಗೆ ಸಹಾಯವಾಗುತ್ತದೆ.
  • ತುಪ್ಪದಲ್ಲಿ ಇರುವ ವಿಟಮಿನ್‌ಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತುಪ್ಪವನ್ನು ನೇರವಾಗಿ ತಿನ್ನುವುದು ಬೇಡ. ಆಹಾರ ಪದಾರ್ಥದೊಂದಿಗೆ ಸೇರಿಸಿಕೊಂಡು ಸೇವಿಸಿ.
  • ಖಾಸಗಿ ಭಾಗಗಳಲ್ಲಿ ಹುಣ್ಣು, ತುರಿಕೆಯಾದರೆ ತುಪ್ಪವನ್ನು ಕೈಯಿಂದ ಚೆನ್ನಾಗಿ ತಿಕ್ಕಿದರೆ ಅದು ಮುಲಾಮ್ ರೀತಿಯಾಗುತ್ತದೆ. ಅದನ್ನು ಹುಣ್ಣು ತುರಿಕೆಗಳಿಗೆ ಹಚ್ಚಬೇಕು. ಬೇಗ ಕಡಿಮೆ ಆಗುತ್ತದೆ.
  • ಸ್ನಾಯುಗಳಿಗೆ, ಕೀಲುಗಳಿಗೆ, ಬೇಕಾದ ಪೋಷಕಾಂಶಗಳು ತುಪ್ಪದಿಂದ ಸಿಗುತ್ತದೆ. ಗಟ್ಟಿ ಮುಟ್ಟಾಗಿ ದೇಹ ಇರಬೇಕೆಂದರೆ ತುಪ್ಪ ಅಗತ್ಯ. ಹಿಂದಿನ ಕಾಲದವರು ಹೆಚ್ಚಾಗಿ ತುಪ್ಪವನ್ನು ಬಳಸುತ್ತಿದ್ದರು. ಹಾಗಾಗಿಯೇ ಅವರು ನಮಗಿಂತ ಗಟ್ಟಿ ಮುಟ್ಟಾಗಿ ಇದ್ದಾರೆ
  • ಎದೆ ಉರಿ, ಹೊಟ್ಟೆ ಉರಿ ಸಮಸ್ಯೆಯಿಂದ ಬಳಲುವವರು ಒಂದು ಚಮಚ ತುಪ್ಪವನ್ನು ಬಿಸಿಬಿಸಿ ಅನ್ನದೊಂದಿಗೆ ಕಲಸಿಕೊಂಡು ಸೇವಿಸಿ. ೫ ತುತ್ತು ಬೇರೆ ಪದಾರ್ಥ ಹಾಕಿಕೊಂಡು ಊಟ ಮಾಡುವ ಮೊದಲು ತುಪ್ಪದ ಅನ್ನ ಸೇವಿಸಿ. ಎದೆ ಉರಿ, ಹೊಟ್ಟೆ ಉರಿ ನಿವಾರಣೆಯಾಗುತ್ತದೆ.
  • ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುವಲ್ಲಿ ತುಪ್ಪದ ಪಾತ್ರ ದೊಡ್ಡದಿದೆ. ದಿನವೂ ತುಪ್ಪವನ್ನು ಸೇವನೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ತಡೆಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss