Tuesday, July 5, 2022

Latest Posts

ನಿದ್ರಾ ಹೀನತೆ ಸಮಸ್ಯೆಯಿಂದ ಒದ್ದಾಡುತ್ತಿರುವಿರಾ? ಇಲ್ಲಿದೆ ಮನೆ ಮದ್ದು

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದೆಯಂತೆ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಚಿಂತೆ ಎಂಬುದು ಇಲ್ಲದವರೇ ಇಲ್ಲ. ಪ್ರತಿಯೊಬ್ಬನಿಗೂ ಚಿಂತೆ ಎಂಬುದು ಹಾಸಿ ಹೊದಿಯುವಷ್ಟು ಇರುತ್ತದೆ. ಹಾಗಾಗಿ ನಿದ್ರಾ ಹೀನತೆ ಹೆಚ್ಚುತ್ತಿದೆ. ಮತ್ತೊಂದು ಈಗಿನ ಆಹಾರ ಪದ್ಧತಿ ಕೂಡ ನಿದ್ರಾ ಹೀನತೆಗೆ ಕಾರಣವಾಗುತ್ತಿದೆ. ನಿದ್ರಾ ಹೀನತೆ ಸಮಸ್ಯೆಗೆ ಇಲ್ಲದೆ ಮನೆ ಮದ್ದು.

  • ಒಂದು ಲೋಟ ಬೆಚ್ಚಗಿನ ಹಾಲನ್ನು ರಾತ್ರಿ ಮಲಗುವಾಗ ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ನಿದ್ರೆ ಮಾಡುವ ಮುನ್ನ ಚಹಾ, ಕಾಫಿ ಕುಡಿಯುವುದನ್ನು ನಿಲ್ಲಿಸಿ. ನಿದ್ರೆ ಮಾಡುವುದಕ್ಕೂ ಎಂಟು ಗಂಟೆ ಮೊದಲು ಕಾಫಿ. ಟೀ ಸೇವಿಸುವುದು ಒಳ್ಳೆಯದು.
  • ಜಾಯಿ ಕಾಯಿ, ಜೇಷ್ಟಮದ್ದನ್ನು ಮಲಗುವ ಮುನ್ನು ತೇಯ್ದುಕೊಂಡು ಕಡಲೇ ಕಾಳಷ್ಟು ಸೇವಿಸಿ. ಚೆನ್ನಾಗಿ ನಿದ್ದೆ ಬರುತ್ತದೆ.
  • ದೈಹಿಕವಾಗಿ ದಣಿದರೆ ಬೇಗ ನಿದ್ದೆ ಬರುತ್ತದೆ. ವ್ಯಾಯಾಮ ಮಾಡುವುದು, ಸೈಕಲ್ ಹೊಡೆಯುವುದು, ಆಟವಾಡುವುದು ಹೀಗೆ ಸಾಯಂಕಾಲದ ಹೊತ್ತಿಗೆ ದೇಹಕ್ಕೆ ದಣಿವಾಗುವಂತ ಕೆಲಸವನ್ನು ಮಾಡಿರಿ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
  • ಈರುಳ್ಳಿಯನ್ನು ಜಾಸ್ತಿ ತಿನ್ನುವುದರಿಂದ ನಿದ್ದೆ ಬರುತ್ತದೆ. ಊಟದ ಜೊತೆ ಈರುಳ್ಳಿಯನ್ನು ಸೇವಿಸಿ ರಾತ್ರಿ ನಿದ್ದೆ ಬರುತ್ತದೆ.
  • ರಾತ್ರಿ ಮಲಗುವಾಗ ಸಾಧ್ಯವಾದರೆ ಗಸಗಸೆಯನ್ನು ಹಾಲಿಗೆ ಹಾಕಿಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿಕೊಂಡು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಬೇಗ ನಿದ್ದೆ ಬರುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss