Wednesday, August 10, 2022

Latest Posts

“ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ, ಆದರೆ‌ ಮದುವೆ ಆಗೋದಿಲ್ಲ” ಎಂದ ಪ್ರಿಯತಮ!! ಮನನೊಂದ ಯುವತಿ ಮಾಡಿದ್ದೇನು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರೀತಿಸಿದ ಹುಡುಗ ಮದುವೆಯಾಗಲು ಒಪ್ಪಲಿಲ್ಲವೆಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪತಂಚೆರುವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪತಂಚೆರವು ವಲಯದ ಲಕ್ದರಮ್​ ಗ್ರಾಮದ ನಿವಾಸಿ ಶ್ರಾವಣಿ(21) ಮೃತಳು. ಶ್ರಾವಣಿ ಇದೇ ಗ್ರಾಮದ ವಿಕ್ಕಿ ಎಂಬುವನನ್ನು ಪ್ರೀತಿಸುತ್ತಿದ್ದಳು. ಶ್ರಾವಣಿಯ ಅಂಕಲ್ ರಾಜಶೇಖರ್​ ರೆಡ್ಡಿ​  ಮದುವೆ ಬಗ್ಗೆ ವಿಕ್ಕಿ ಜೊತೆ ಮಾತನಾಡಿದಾಗ, ವಿಕ್ಕಿ ತನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದಿದ್ದ. “ಹಾಗಾದರೆ ನೀನು ಶ್ರಾವಣಿಯನ್ನು ಮರೆತು ಬಿಡು, ಅವಳನ್ನು ಹಿಂಬಾಲಿಸಬೇಡ” ಎಂದು ರಾಜಶೇಖರ್​ ವಿಕ್ಕಿಗೆ ಹೇಳಿದ್ದರು.

ರಾಜಶೇಖರ್​ ರೆಡ್ಡಿ ಕಳೆದ ತಿಂಗಳು ವೃತಪಟ್ಟಿದ್ದು, ವಿಕ್ಕಿ ಮತ್ತೆ ಶ್ರಾವಣಿಯನ್ನು ಹಿಂಬಾಲಿಸಲು ಆರಂಭಿಸಿದ್ದಾನೆ. ಇದು ಶ್ರಾವಣಿಯ ಮನೆಯವರಿಗೆ ತಿಳಿದು ಅವರು ವಿಕ್ಕಿಗೆ ಶ್ರಾವಣಿಯೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಇದರ ನಡುವೆ ಶ್ರಾವಣಿಯ ಹಿರಿಯ ಸೋದರ ಮಾವ ಮರಣ ಹೊಂದಿದಾಗ ಅಂತ್ಯಸಂಸ್ಕಾರಕ್ಕೆಂದು ಇಡೀ ಕುಟುಂಬ ಊರಿಗೆ ತೆರಳಿದ್ದು, ಅತ್ಯಂಸಂಸ್ಕಾರದ ನಡುವೆಯೇ ಶ್ರಾವಣಿ ಭಾನುವಾರ ಮಧ್ಯಾಹ್ನ ಮನೆಗೆ ಹಿಂದಿರುಗಿದ್ದಾಳೆ. ಪಾಲಕರು ಸಹ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶ್ರಾವಣಿಯನ್ನು ನೋಡಿದ್ದಾರೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರಾವಣಿ ಪಾಲಕರು ವಿಕ್ಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಶ್ರಾವಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss