ಹೊಸದಿಲ್ಲಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತದ ಮಾತು ಸತ್ಯವಾಗುತ್ತಿದೆ. ಈ ವರ್ಷ ಗಣೇಶೋತ್ಸವದಲ್ಲಿ ಚೀನಾದಿಂದ ಯಾವುದೇ ವಿಗ್ರಹಗಳನ್ನು ಆಮದು ಮಾಡಿಕೊಂಡಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಾತನಾಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಪ್ರತಿವರ್ಷ ಸುಮಾರು 30 ಕೋಟಿ ಗಣೇಶ ವಿಗ್ರಹಗಳನ್ನು ದೇಶಾದ್ಯಂತ ಖರೀದಿಸಲಾಗುತ್ತದೆ. ಚೀನಾದಿಂದ ಪ್ರತಿವರ್ಷ ಸುಮಾರು 500 ಕೋಟಿ ರೂ. ಗಣೇಶ ವಿಗ್ರಹಗಳನ್ನು ಆಮದು ಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಭಾರತ ಗಣೇಶ ವಿಗ್ರಹಗಳನ್ನು ಆಮದು ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಈ ಹಿಂದೆ, ಭಾರತೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಸಿಎಐಟಿ ಕ್ಷೇತ್ರಗಳಾದ್ಯಂತ ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಈ ವರ್ಷ ದೇವಾಲಯಗಳಿಗೆ ಹೋಗುವ ಬದಲು ಜನರು ತಮ್ಮ ಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಿದರು ಎಂದು ಅವರು ಹೇಳಿದರು.