ಯುವತಿಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಕಡಿಮೆ ಮಾಡೋಕೆ ಎಷ್ಟೇ ಪ್ರಯತ್ನ ಮಾಡಿದರು ಕಡಿಮೆ ಆಗುತ್ತಿಲ್ಲ ಅನ್ನುವ ಬೇಸರವಿರುತ್ತದೆ. ಆದರೆ ಆ ಬೇಸರವನ್ನು ನೀವು ದೂರ ಮಾಡಿಕೊಳ್ಳೋಕೆ ಇದೆ ಸಿಂಪಲ್ ಟಿಪ್ಸ್.
ಅಲೊವೆರಾ: ನಿಮ್ಮ ಕಣ್ಣಿನ ಸುತ್ತಲಿನ ಭಾಗಕ್ಕೆ ಅಲೂವೆರಾ ಜೆಲ್ ಹಚ್ಚಿ 15-20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿದ ಮುಖ ತೊಳೆಯಿರಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಬಣ್ಣ ಕಡಿಮೆಯಾಗುತ್ತದೆ.
ಸೌತೆಕಾಯಿ, ಟೊಮಾಟೋ, ಆಲೂಗಡ್ಡೆ: ಈ ಯಾವುದಾದರೂ ಒಂದು ತರಕಾರಿಯನ್ನು 20 ರಿಂದ 30 ನಿಮಿಷ ನಿಮ್ಮ ಕಣ್ಣಿನ ಮೇಲಿಡುವುದರಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಆದರೆ ನೆನಪಿಡಿ ಇದನ್ನು ಪ್ರತಿ ದಿನ ಮಾಡಬೇಕು.
ರೋಸ್ ವಾಟರ್: ಕಾಟನ್ ಪ್ಟಾಡ್ ನಲ್ಲಿ ರೋಸ್ ವಾಟರ್ ನೆನಸಿಟ್ಟು ಅವನ್ನು ದಿನಕ್ಕೆ ಎರಡು ಬಾರಿ ಕಣ್ಣಿನ ಮೇಲೆ ಇಟ್ಟರೆ ನಿಮ್ಮ ಮುಖದಲ್ಲಿರುವ ಕಪ್ಪು ಬಣ್ಣ ಕಡಿಮೆಯಾಗುತ್ತದೆ.
ತಂಪು ಟೀ ಬ್ಯಾಗ್: ಆಂಟಿ ಆಕ್ಸಿಡೆಂಡ್ ಇರುವ ಟೀ ಬ್ಯಾಗ್ ಅನ್ನು ಫ್ರಿಡ್ಜ್ ನಲ್ಲಿಟ್ಟು ಬಳಿಕ ನಿಮ್ಮ ಕಣ್ಣಿನ ಮೇಲಿಡಿ.
ಅರಿಶಿನ: ಅರಿಶಿನ ಹಾಗೂ ಹಾಲು ಮಿಶ್ರಣ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದ ಮುಖದಲ್ಲಿರುವ ಸುಕ್ಕು ಹಾಗೂ ಕಪ್ಪು ಬಣ್ಣ ಕಡಿಮೆಯಾಗುತ್ತದೆ.
ಡಾರ್ಕ್ ಚಾಕೊಲೇಟ್: ಪ್ರತಿ ದಿನ ಒಂದಿಷ್ಟು ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ತ್ವಚೆಗೆ ಸುಂದರ ಕಾಂತಿ ನೀಡುತ್ತದೆ.