Tuesday, August 16, 2022

Latest Posts

ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಗ್ಯಾಸ್ಟ್ರಿಕ್ ನಿಂದ ನಾವು ಸಾಕಷ್ಟು ಕಷ್ಟ ಅನುಭವಿಸಿರುತ್ತೇವೆ. ಕೆಲವೊಮ್ಮೆ ಈ ಗ್ಯಾಸ್ ನಿಂದ ನಾವು ಮುಜುಗರವನ್ನುಂಟು ಮಾಡಿಕೊಳ್ಳುತ್ತೇವೆ. ನೀವು ಈ ಟಿಪ್ಸ್ ಫಾಲೋ ಮಾಡಿ ನೋಡಿ ಶೀಘ್ರವೇ ನೀವು ಗ್ಯಾಸ್ಟ್ರಿಕ್ ನಿಂದ ಮುಕ್ತಿ ಪಡೆಯುತ್ತೀರ.

ನೀರು ಕುಡಿಯುವುದು: ನಾವು ಪ್ರತಿದಿನ 3 ರಿಂದ 4 ಲೀಟರ್ ನೀರು ಕುಡಿಯಬೇಕು. ಬೆಳಗ್ಗೆ ಹಾಗೂ ರಾತ್ರಿ 1 ಗ್ಲಾಸ್ ಬಿಸಿ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

ಶುಂಠಿ: ಶುಂಠಿ ಜಜ್ಜಿ ನೀರಿಗೆ ಹಾಕಿ ಕುದಿಸಿ ತಣ್ಣಗಾದ ಬಳೀಕ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ. ನೀವು ಟೀ ಕುಡಿಯುವಾಗಲೂ ಶುಂಠಿ ಬಳಸಿದರೆ ಉತ್ತಮ.

ಅಡಿಗೆ ಸೋಡಾ: ಒಂದು ಲೋಟಾ ನೀರಿಗೆ ¼ ಚಮಚ ಅಡುಗೆ ಸೋಡಾ ಹಾಕಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ.

ಪಲಾವ್ ಎಲೆ: ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಜೀರಿಗೆ ನೀರು: ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಇಂಗು: ಅರ್ದ ಟೀ ಸ್ಪೂನ್ ಇಂಗುವನ್ನು ಒಂದು ಲೋಟ ಮಚ್ಚಿಗೆ ಹಾಗೂ ಬೆಚ್ಚಗಿನ ನೀರಿಗೆ ಸೇರಿಸಿ ಕುಡಿದರೆ ಗ್ಯಾಸ್ಟ್ರಿಕ್ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss