Friday, January 22, 2021

Latest Posts

ನಿಮಗೆ ಫ್ಯಾನ್ ಹಚ್ಚಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲವೇ?ಅತಿಯಾಗಿ ಫ್ಯಾನ್ ಬಳಸಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ…

ಬಹಳ‌ ಜನರು ಟೀ, ಕಾಫಿ, ಮದ್ಯಪಾನ ಮುಂತಾದವಗಳನ್ನು ಕುಡಿಯುವ ಚಟವಾಗಿಸಿಕೊಂಡಂತೆ ಫ್ಯಾನ್ ಚಟವನ್ನೂ ಹಚ್ಚಿಸಿಕೊಂಡಿರುತ್ತಾರೆ. ಅವರಿಗೆ  ಫ್ಯಾನ್ ಹಾಕಿಕೊಳ್ಳದಿದ್ದರೆ ನಿದ್ದೆಯೇ ಬರುವುದಿಲ್ಲ. ಚಳಿಗಾಲವಿರಲಿ, ಮಳೆಗಾಲವಿರಲಿ ಫ್ಯಾನ್  ಬೇಕು.  ಆದರೆ ಅತಿಯಾದ ಫ್ಯಾನ್ ಬಳಕೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತುಂಬಾ ಜನಕ್ಕೆ ಫ್ಯಾನ್ ಬಳಸಿದರೆ ದೇಹದ ಮೇಲೆ ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಇಲ್ಲ. ಹಾಗಾದರೆ ಇದನ್ನು ಓದಿ…

ದೇಹದ ಉಷ್ಣತೆ:
ಫ್ಯಾನ್ ಅತಿಯಾಗಿ ಬಳಸಿದರೆ ದೇಹದ ಉಷ್ಣತೆ ಹೆಚ್ಚುತ್ತದೆ. ಏಕೆಂದರೆ ಫ್ಯಾನ್ ಗಾಳಿ ನಿಮ್ಮ ದೇಹದಲ್ಲಿರುವ ನೀರಿನ ಅಂಶಗಳನ್ನು ಹೀರಿಕೊಳ್ಳುತ್ತದೆ.  ದೇಹವನ್ನು ಒಣಗಿಸುತ್ತದೆ. ದೇಹದ ಉಷ್ಣತೆ ಹೆಚ್ಚಿದರೆ ಕೆಮ್ಮು, ನೆಗಡಿ, ಜ್ವರ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಅಲರ್ಜಿ:
ಅಲರ್ಜಿಯಿಂದ ಸೀನು, ನೆಗಡಿ ಸಮಸ್ಯೆ ಇರುವವರು ಫ್ಯಾನ್ ಬಳಸಿದರೆ ಮತ್ತಷ್ಟು ಹೆಚ್ಚುತ್ತದೆ. ನೀವು ರೂಮ್ ನಲ್ಲಿ  ಫ್ಯಾನ್ ಹಾಕಿಕೊಂಡರೆ ರೂಮ್’ನಲ್ಲಿರುವ ದೂಳನ್ನು ಫ್ಯಾನ್ ನಿಮ್ಮೆಡೆಗೆ ಹಾಕುತ್ತದೆ. ದೂಳು ಅಲರ್ಜಿ ಇರುವವರಿಗೆ ಅಲರ್ಜಿ ಮತ್ತಷ್ಟು ಹೆಚ್ಚುತ್ತದೆ.

ಒಣ ತ್ವಚೆ:
ಫ್ಯಾನ್ ಗಾಳಿ ನಿಮ್ಮ ತ್ವಚೆಯನ್ನು ಒಣಗಿಸುತ್ತದೆ. ಕಣ್ಣುಗಳು ಬಿರಿದಂತೆ ಫೀಲ್ ಆಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ.  ನಿಮ್ಮ ದೇಹದಲ್ಲಿನ ನೀರಿನ ಅಂಶವನ್ನು ಫ್ಯಾನ್ ಹೀರಿಕೊಳ್ಳುತ್ತದೆ. ತ್ವಚೆ ಒಣಗುತ್ತದೆ.

ನೋವು:
ಸಂಧಿವಾತ, ಮಂಡಿ ನೋವು ಸಮಸ್ಯೆ ಇರುವವರು ಯಾವ ಕಾರಣಕ್ಕೂ ಫ್ಯಾನ್ ಬಳಸಬೇಡಿ. ಏಕೆಂದರೆ ಫ್ಯಾನ್ ಗಾಳಿ ಇಂತಹ ನೋವುಗಳನ್ನು ಹೆಚ್ಚಿಸುತ್ತದೆ. ನೋವಿರುವ ಭಾಗಕ್ಕೆ ಫ್ಯಾನ್ ಗಾಳಿ ಸೋಕಿದರೆ ನೋವು ಮತ್ತಷ್ಟು ಹೆಚ್ಚುತ್ತದೆ.

ಕೂದಲು ಸಮಸ್ಯೆ:
ಅತಿಯಾಗಿ ಫ್ಯಾನ್ ಬಳಸಿದರೆ ಕೂದಲು ಉದುರುವುದು ಹೆಚ್ಚುತ್ತದೆ. ಕೂದಲು ಸ್ಪಿಲ್ಟ್ ಆಗುತ್ತದೆ. ದೇಹದ ಉಷ್ಣತೆ ಹೆಚ್ಚಾಗಿ ಹೊಟ್ಟು ಕೂಡ ಹೆಚ್ಚುತ್ತದೆ.

ಉಸಿರಾಟದ ಸಮಸ್ಯೆ:
ಉಸಿರಾಟದ ಸಮಸ್ಯೆ ಇರುವವರು ಫ್ಯಾನ್ ಗಾಳಿ ಬಳಸಬಾರದು. ಒಮ್ಮೆ ಫ್ಯಾನ್ ಗಾಳಿ ಹಿತವೆನಿಸಿದರೂ ಜಾಸ್ತಿ ಹೊತ್ತು ಫ್ಯಾನ್ ಬಳಸಿದರೆ ಮೂಗು ಕಟ್ಟುತ್ತದೆ. ಉಸಿರಾಡುವುದಕ್ಕೆ ತೊಂದರೆಯಾಗುತ್ತದೆ. ಶ್ವಾಸ ಕೋಶದಲ್ಲಿ ದೂಳು ಸೇರಿಕೊಂಡು ಮತ್ತಷ್ಟು ಉಸಿರು ಕಟ್ಟುತ್ತದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!