ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ನೀವು ಇದನ್ನು ಓದಲೇ ಬೇಕು…!

0
413

ಒಬ್ಬ ಆರೋಗ್ಯವಂತ ವ್ಯಕ್ತಿ ಕಡಿಮೆ ಎಂದರೂ ದಿನಕ್ಕೆ ಎರಡು ಲೀಟರ್ ನೀರನ್ನು ಸೇವಿಸಬೇಕು. ನೀರನ್ನು ಕುಡಿಯಬೇಕು ಎಂದಾಕ್ಷಣ ಯಾವದೋ ನೀರನ್ನು ಯಾವುದೋ ಸಮಯದಲ್ಲಿ ಕುಡಿದರೆ ಅದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಸಮಯದ ಆಧಾರದ ಮೇಲೆ ಪ್ರಮಾಣದ ರೀತಿಯಲ್ಲಿ ನೀರನ್ನು ಕುಡಿದರೆ ಮಾತ್ರ ಅದು ನಮ್ಮ ದೇಹಕ್ಕೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಬಿಸಿ ನೀರು ಸೇವಿಸಿದರೆ ಏನೆಲ್ಲ ಲಾಭವಿದೆ ಎಂದು ನಿಮಗೆ ಗೊತ್ತಿದೆಯೇ? ನೀವು ಬಿಸಿ ನೀರು ಸೇವಿಸುತ್ತೀರಾ? ನಿಮಗೆ ಬಿಸಿ ನೀರು ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಗೊತ್ತಾದರೆ ಖಂಡಿತ ದಿನವೂ ಉಗುರು ಬೆಚ್ಚಗಿನ ನೀರನ್ನು ಸೇವಿಸುತ್ತೀರಾ.

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಬಿಸಿ ನೀರು ಕರುಳಿನ ಕ್ರೀಯೆಯನ್ನು ಸರಾಗಗೊಳಿಸುತ್ತದೆ.
  • ಹಲವಾರು ಸಂಶೋಧನೆ ಹೇಳಿರುವ ಪ್ರಕಾರ ಬೆಳಿಗ್ಗೆ ಬಿಸಿ ನೀರು ಸೇವನೆ ಮಾಡಿದರೆ ತೂಕ ಇಳಿಸಲು ನೆರವಾಗುತ್ತದೆ. ಬಿಸಿ ನೀರು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ತಣ್ಣೀರಿಗೆ ಹೋಲಿಸಿದರೆ ಬಿಸಿ ನೀರು ಹೆಚ್ಚು ಹೊತ್ತು ಹೊಟ್ಟೆಯಲ್ಲಿ ಉಳಿಯುತ್ತದೆ.
  • ಮತ್ತೊಂದು ಮಹತ್ವದ ಲಾಭವೆಂದರೆ ಅದು ಕಟ್ಟಿದ ಮೂಗಿನ ನಿವಾರಣೆ ಮಾಡುವುದು. ಮುಚ್ಚಿ ಹೋಗಿರುವಂತಹ ಸೈನಸ್ ನ್ನು ಬಿಡಿಸುವುದು. ಶೀತದ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಸೈನಸ್ ತೊಂದರೆಯಿಂದ ಬರುವ ತಲೆನೋವನ್ನೂ ಸಹ ನಿವಾರಣೆ ಮಾಡುತ್ತದೆ.
  • ಬಿಸಿ ನೀರು ಸೇವನೆ ರಕ್ತ ಸಂಚಾರವನ್ನು ಸರಾಗ ಮಾಡಿಸುತ್ತದೆ. ಬಿಸಿ ನೀರಿನ ತಾಪಕ್ಕೆ ರಕ್ತ ನಾಳಗಳು ಹಿಗ್ಗುತ್ತವೆ. ಇದರಿಂದ ಇಡೀ ದಿನವೂ ರಕ್ತ ಸರಾಗವಾಗಿ ಹರಿಯುತ್ತದೆ. ದೇಹದಲ್ಲಿ ರಕ್ತ ಸರಾಗವಾಗಿ ಹರಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಯನ್ನು ನಿವಾರಿಸಬಹುದಾಗಿದೆ.
  • ಹೆಣ್ಣು ಮಕ್ಕಳ ಮಾಸಿಕ ತೊಂದರೆಯಾದಂತಹ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಮತ್ತು ರಕ್ತ ಸ್ರಾವ ಸರಿಯಾಗಿ ಆಗುತ್ತದೆ. ಬಿಸಿ ನೀರಿನಲ್ಲಿ ದೇಹದ ಒಳಗ ಆಗುವಂತಹ ನೋವನ್ನು ನಿವಾರಣೆ ಮಾಡುವ ಶಕ್ತಿ ಇದೆ.
  • ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಬಿಸಿ ನೀರಿಗಿದೆ. ದಿನದ ಹಲವು ಒತ್ತಡಗಳನ್ನು ನಿವಾರಿಸಿ ಕೊಳ್ಳಲು ವ್ಯಸನದತ್ತ ಹೋಗುವ ಬದಲು ಬಿಸಿ ನೀರನ್ನು ಕುಡಿಯುವುದು ಉತ್ತಮ. ಮನಸ್ಸಿನ ನಿರಾಳತೆಗೆ ಕಾರ್ಟಿಸೋಲ್ ಎಂಬ ರಸದೂತ ಕಾರಣವಾಗಿದೆ. ಬಿಸಿ ನೀರಿನಲ್ಲಿ ಕಾರ್ಟಿಸೋಲ್ ಅಂಶ ಇರುವುದರಿಂದ ಇದು ಒತ್ತಡ ಕಡಿಮೆ ಮಾಡುತ್ತದೆ.
  • ನಿಮ್ಮ ಚರ್ಮಕ್ಕೆ ಹೊಳಪು ಕೊಡುವಲ್ಲಿ ಬಿಸಿ ನೀರಿನ ಪಾತ್ರ ದೊಡ್ಡದಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿದರೆ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿಸಿ ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ. ಚರ್ಮಕ್ಕೆ ಹೊಳಪು ಬರುತ್ತದೆ.

LEAVE A REPLY

Please enter your comment!
Please enter your name here