ಬೊಜ್ಜು ಯಾವುದಕ್ಕೆ ಎನ್ನುತ್ತಾರೆ? ನಿಮ್ಮ ಹೈಟ್ ಹಾಗೂ ವೇಟ್ ಗಮನಿಸಿ ನಿಮ್ಮ ಹೈಟ್ಗೆ ನಿಮ್ಮ ತೂಕ ಸರಿಯಾಗಿದೆಯೋ? ಅಥವಾ ತೂಕ ಜಾಸ್ತಿ ಆಯಿತೋ? ಅಥವಾ ಬೊಜ್ಜು ಬಂದಿದೆಯೋ? ಬಿಎಮ್ಐ ಎಷ್ಟಿದೆ ಎಂದು ತಿಳಿದುಕೊಳ್ಳುವ ಮೂಲಕ ನಮಗೆ ಬೊಜ್ಜು ಇದೆಯೋ ಇಲ್ಲವೋ ನಾವೇ ನೋಡಿಕೊಳ್ಳಬಹುದು.
- ಬಾಡಿ ಮಾಸ್ ಇಂಡೆಕ್ಸ್ ಲೆಕ್ಕ ಮಾಡುವುದು ಹೇಗೆ?
ಗೂಗಲ್ನಲ್ಲಿ ಬಿಎಮ್ಐ ಕ್ಯಾಲುಕುಲೇಟರ್ ಸಿಗುತ್ತದೆ. ಇದರಲ್ಲಿ ನಿಮ್ಮ ತೂಕ ಹಾಗೂ ನಿಮ್ಮ ಎತ್ತರ ಹಾಕಿದರೆ ಅದೇ ಉತ್ತರ ನೀಡುತ್ತದೆ. - ಯಾವಾಗ ಬೊಜ್ಜು ಎನ್ನಬಹುದು?
- ನಿಮ್ಮ ಬಿಎಮ್ಐ 18.5-24.9 ಇದ್ದರೆ ನಿಮ್ಮದು ಆರೋಗ್ಯಕರ ತೂಕ.
- 25- 29.9 ಇದ್ದರೆ ನಿಮ್ಮ ತೂಕ ಹೆಚ್ಚಿದೆ ಎಂದು ಅರ್ಥ
- 30-39.9 ಇದ್ದರೆ ನಿಮಗೆ ಬೊಜ್ಜು ಎನ್ನಬಹುದು.
- 40 ಇದಕ್ಕಿಂತ ಹೆಚ್ಚಿದ್ದರೆ ನಿಮ್ಮದು ಅತಿ ಹೆಚ್ಚು ಬೊಜ್ಜು ಎನ್ನಬಹುದು.
- ಬೊಜ್ಜು ಬಂದರೆ ಏನೇನು ಸಮಸ್ಯೆಯಾಗುತ್ತದೆ?
- ಉಸಿರಾಟದ ತೊಂದರೆ
- ಅತಿ ಹೆಚ್ಚು ಬೆವರುವುದು
- ಗೊರಕೆ ಹೊಡೆಯುವುದು
- ಯಾವಾಗಲೂ ಸುಸ್ತು
- ಬೆನ್ನು, ಮೂಳೆ ನೋವು
- ಮಧುಮೇಹ
- ಹೈಬಿಪಿ
- ಹೃದಯ ಸಂಬಂಧಿ ಕಾಯಿಲೆ
- ಅಸ್ತಮಾ
- ಕರುಳು ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್
- ಗ್ಯಾಸ್ಟ್ರಿಕ್
- ಕಿಡ್ನಿಸ್ಟೋನ್ಸ್