ಕೆಲವರಿಗೆ ರಾತ್ರಿ ನಿದ್ದೆ ಮಾಡಲಾಗದೆ ತಮ್ಮ ಇಡೀ ದಿನಚರಿ ಹಾಳು ಮಾಡಿಕೊಳ್ಳುತ್ತಾರೆ. ನಿದ್ದೆ ಇಲ್ಲದೆ ಮೊಬೈಲ್ ಹಿಡಿದುಕೊಂಡಿರುತ್ತಾರೆ. ಇದರಿಂದ ದಿನವಿಡೀ ನಿದ್ರೆಯ ಮಂಪರಿನಲ್ಲಿಯೇ ಕಳೆಯುವಂತದ್ದಾಗುತ್ತದೆ. ರಾತ್ರಿ ನಿದ್ದೆ ಮಾಡದಿದ್ದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಬರುತ್ತದೆ ಗೊತ್ತಾ?
ಪೀರಿಯಡ್ಸ್ ಸಮಸ್ಯೆ: ದೇಹದಲ್ಲಿ ಹಾರ್ಮೋನಲ್ ಬದಲಾವಣೆಗಳಾಗುತ್ತದೆ, ಇದರಿಂದ ನಮ್ಮ ತಿಂಗಳ ಪೀರಿಯಡ್ಸ್ ಸಮಯದಲ್ಲಿ ನೋವುಗಳನ್ನು ಅನುಭವಿಸಬೇಕಾಗಬಹುದು.
ಹೃದಯ ಸಂಬಂಧಿ ಸಮಸ್ಯೆ: ನಿದ್ದೆ ಮಾಡದಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೃದಯಾಘಾತ ಸಮಸ್ಯೆಗಳಿಗೆ ಪರಿಣಾಮ ಬೀರುತ್ತದೆ.
ಮಧುಮೇಹ: ನಿದ್ರೆ ಕಡಿಮೆ ಮಾಡುವುದರಿಂದ ದೇಹದಲ್ಲಿ ಡಯಾಬಿಟೀಸ್ ಸಮಸ್ಯೆಗಳು ಹೆಚ್ಚಾಗುತ್ತದೆ.
ತೂಕ: ಅಗತ್ಯ ನಿದ್ದೆ ಮಾಡದಿದ್ದರೆ ದೇಹದ ತೂಕ ಇಳಿಕೆಗೆ ಮಾಡುತ್ತಿರುವ ಕಾರ್ಯಗಳಿಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಡಿಮೆ ನಿದ್ದೆಯೂ ನಮ್ಮ ತೂಕ ಹೆಚ್ಚಾಗುವ ಸಾಧ್ಯತೆ ಇದೆ.