ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಗೆ ಹಸಿವೇ ಆಗುತ್ತಿಲ್ಲವಾ? ಹಸಿವಾಗಲು ಈ ಟಿಪ್ಸ್‌ಗಳನ್ನು ಫಾಲೋ ಮಾಡಿ

ಕೆಲವು ಮಕ್ಕಳಿಗೆ ಆಹಾರ ತಿನಿಸಲು ತಂದೆ ತಾಯಿ ಹರಸಾಹಸ ಮಾಡಬೇಕಾಗುತ್ತದೆ. ಇನ್ನು ಕೆಲವು ಮಕ್ಕಳು ಕೊಟ್ಟಿದನ್ನು ಚೆನ್ನಾಗಿ ತಿನ್ನುತ್ತಾರೆ. ನೋಡಲು ಹೆಲ್ತಿಯಾಗಿ ಕಾಣುತ್ತಾರೆ. ತೆಳ್ಳಗಿರುವ ಮಕ್ಕಳಿಗೆ ಚೆನ್ನಾಗಿ ತಿನ್ನಿಸಿ ಎಂದು ಬಂದವರು ಹೋದವರು ಎಲ್ಲರೂ ಹೇಳುತ್ತಾರೆ ಇದರಿಂದ ಬೇಸತ್ತ ನೀವು ಮಕ್ಕಳಿಗೆ ಹೊಡೆದು ಬೈದು ತಿನ್ನಿಸುತ್ತೀರಿ. ಆದರೆ ಖುಷಿಯಿಂದ ಅವರು ತಿನ್ನುವುದಿಲ್ಲ ಅದಕ್ಕೆ ತಿಂದ ಆಹಾರ ಅವರ ಮೈಗೆ ಹತ್ತುವುದಿಲ್ಲ. ಇದು ಕೇವಲ ಮಕ್ಕಳ ಸಮಸ್ಯೆ ಅಷ್ಟೇ ಅಲ್ಲ, ದೊಡ್ಡವರಿಗೂ ಬರುವ ಸಮಸ್ಯೆ ಹಸಿವಾಗದೇ ತಿನ್ನುವುದಾದರೂ ಹೇಗೆ?
ಟೇಸ್ಟಿ ಆಹಾರ: ಯಾವಾಗಲೂ ಜಂಕ್ ಅಥವಾ ಯಾವಾಗಲೂ ತರಕಾರಿ ತಿನ್ನುವುದಕ್ಕೂ ಆಗುವುದಿಲ್ಲ. ಮನೆಯ ಆಹಾರ ತಿನ್ನಲು ಟೇಸ್ಟಿ ವಿಧಾನ ಹುಡುಕಿಕೊಳ್ಳಿ. ಆಗಾಗ ಹೆಚ್ಚೇ ಜಂಕ್ ತಿನ್ನಿ ಆಗ ನಿಮಗೆ ಮನೆ ಊಟವೇ ಬೆಸ್ಟ್ ಎನಿಸುತ್ತದೆ.
ಕಡಿಮೆ ತಿನ್ನಿ: ಚೆನ್ನಾಗಿ ತಿಂದರೆ ಅದು ಜೀರ್ಣವೂ ಆಗುವುದಿಲ್ಲ. ಆಮೇಲೆ ನಿಮಗೆ ಹಸಿವೂ ಆಗುವುದಿಲ್ಲ. ಹಾಗಾಗಿ ಕಮ್ಮಿ ತಿನ್ನಿ. ತಿನ್ನುವುದನ್ನೇ ಎರಡು ಭಾಗ ಮಾಡಿಕೊಳ್ಳಿ. ಮಧ್ಯೆ ಮಧ್ಯೆ ತಿನ್ನಿ ಆಗ ನಿಮಗೆ ಬೇಗ ಹಸಿವಾಗುತ್ತದೆ.
ನಿಮಗಿಷ್ಟದ್ದೇ ಸೇವಿಸಿ: ಎಲ್ಲ ಆಹಾರವನ್ನೂ ತಿನ್ನಬೇಕು ಎಂದೇನಿಲ್ಲ. ನಿಮಗೆ ಇಷ್ಟದ ಆಹಾರ ಮಾತ್ರ ತಿನ್ನಿ. ಈಗ ಕೆಲವರಿಗೆ ಹಾಲು ಇಷ್ಟ ಇಲ್ಲ. ಹಾಗಾದರೆ ಹಾಲಿನಲ್ಲಿ ಸಿಗುವ ಕ್ಯಾಲ್ಷಿಯಂ ಮತ್ತೆಲ್ಲಿ ಸಿಗುತ್ತದೆ. ಆ ಆಹಾರ ತಿನ್ನಿ.
ಊಟ ಖುಷಿಯಿಂದ ತಿನ್ನಿ: ಇದು ಕಷ್ಟದ ಕೆಲಸ ನನಗೆ ಇದು ಇಷ್ಟ ಇಲ್ಲ, ಯಾವುದೂ ಇಷ್ಟ ಇಲ್ಲ ಎನ್ನುವುದನ್ನು ಮನಸಿನಿಂದ ತೆಗದುಹಾಕಿ. ಇರುವುದನ್ನೇ ಪ್ರೀತಿಯಿಂದ ತಿನ್ನಿ. ಆಹಾರ ಎಂಜಾಯ್ ಮಾಡಿ.

ಸರಿಯಾದ ಸಮಯಕ್ಕೆ ತಿನ್ನಿ: ತಿನ್ನುವ ಆಹಾರವನ್ನು ಸರಿಯಾದ ಸಮಯಕ್ಕೆ ತಿನ್ನಿ. ತಿಂಡಿ ಲೆಟಾಗಿ ತಿಂದರೆ ಮಧ್ಯಾಹ್ನ ಊಟದ ಸಮಯಕ್ಕೆ ಹೇಗೆ ಹಸಿವಾಗುತ್ತೆ ಹೇಳಿ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss