spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಿಷದಲ್ಲಿ ಬೃಹತ್ ಗೋಡೆ ಏರುವ ಸಾಹಸಿ ಶ್ವಾನ: ಅಚ್ಚರಿ ವಿಡಿಯೋ ವೈರಲ್

- Advertisement -Nitte

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಕುರಿತ ಮುದ್ದಾದ ವಿಡಿಯೋ ಹರಿದಾಡುತ್ತಲೇ ಇರುತ್ತದೆ. ಕೆಲವೊಂದು ದೃಶ್ಯ ನಮ್ಮ ಮನಸ್ಸಿಗೆ ಬಹಳ ಆಪ್ತವಾಗಿಬಿಡುತ್ತದೆ. ಇದು ಕೂಡ ಅಂತಹದೇ ಒಂದು ದೃಶ್ಯ. ನೀವು ಈ ದೃಶ್ಯ ನೋಡಿದರೆ ಆಶ್ಚರ್ಯ ಪಡದೇ ಇರಲಾರಿರಿ.

ಇದು ಶ್ವಾನವೊಂದು ಶರವೇಗದಲ್ಲಿ ಗೋಡೆಯೇರುವ ದೃಶ್ಯ. ಈ ಅದ್ಭುತ ದೃಶ್ಯ ಈಗ ಇಂಟರ್‌ನೆಟ್‌ನಲ್ಲಿ ಶ್ವಾನಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದಿದೆ.

ವಿಡಿಯೋದಲ್ಲಿ ಏನಿದೆ.

ತರಬೇತುದಾರರೊಬ್ಬರು ತಮ್ಮ ಶ್ವಾನದೊಂದಿಗೆ ಇರುವ ದೃಶ್ಯದ ಮೂಲಕ ವಿಡಿಯೋ ಕ್ಲಿಪ್ ಪ್ರಾರಂಭವಾಗುತ್ತದೆ. ಈ ತರಬೇತುದಾರ ದೊಡ್ಡ ಗೋಡೆಯೊಂದಕ್ಕೆ ತನ್ನ ಬೆನ್ನನ್ನು ತಾಗಿಸಿಕೊಂಡು ನಿಲ್ಲುತ್ತಾನೆ. ಈ ವೇಳೆ ಓಡಿ ಬರುವ ಶ್ವಾನ ಇವರ ಬೆನ್ನ ಮೇಲೆ ಹಾರಿ ಆ ಬೃಹತ್ ಗೋಡೆಯನ್ನು ಸರಸರನೇ ಏರಿ ಮೇಲೆ ಹೋಗಿ ನಿಂತುಕೊಳ್ಳುತ್ತದೆ. ಈ ದೃಶ್ಯ ನೋಡಿದೆ ಮೇಲೆ ನಾವು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರೆಂಟಿ.

@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದೆ. ಲಕ್ಷಾಂತರ ಜನ ವಿಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss