Wednesday, August 10, 2022

Latest Posts

ನಿಮ್ಮದು ಡಬಲ್ ಎಂಜಿನ್ ಸರ್ಕಾರವೋ ಅಥವಾ ಡಕೋಟಾ ಎಂಜಿನ್ ಸರ್ಕಾರವೋ: ರಾಜ್ಯ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಟೀಕೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಜೆಪಿ ಆಡಳಿತ ನೋಡಿದ ಮೇಲೆ ಇದನ್ನು ಡಬಲ್ ಇಂಜಿನ್ ಸರ್ಕಾರ ಎನ್ನಬೇಕೋ ಅಥವಾ ಡಕೋಟ ಇಂಜಿನ್ ಸರ್ಕಾರ ಎನ್ನಬೇಕೋ ತಿಳಿಯುತ್ತಿಲ್ಲ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, ಮೋದಿಯವರೇ ನೀವು ಹೇಳಿದ ಡಬಲ್ ಇಂಜಿನ್ ಸರ್ಕಾರ ಎಂದರೆ ಇದೇನಾ?
ರಾಜ್ಯದಲ್ಲಿ ನಿಮ್ಮ ಬಿಎಸ್‌ವೈ ಆಡಳಿತದ ಸಾಧನೆ ನೋಡಿದ ಮೇಲೆ ಈ ಸರ್ಕಾರವನ್ನು ಡಬಲ್ ಎಂಜಿನ್ ಸರ್ಕಾರ ಎನ್ನಬೇಕೋ ಅಥವಾ ಡಕೋಟ ಎಂಜಿನ್ ಸರ್ಕಾರ ಎನ್ನಬೇಕೋ ನೀವೇ ಸ್ಪಷ್ಟಪಡಿಸಿ. ಕಿಲುಬುಗಟ್ಟಿರುವ ನಿಮ್ಮ ಈ ಡಕೋಟಾ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿದೆಯೇ?  ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss