Monday, September 21, 2020
Monday, September 21, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ನಿಮ್ಮದೇ ಭಾವನೆಗಳ ಕನ್ನಡಿ ಕನಸು: ಇಲ್ಲಿದೆ ಕನಸುಗಳ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ವಿಷಯಗಳು..

sharing is caring...!

ಪ್ರತಿಯೊಬ್ಬರೂ ಕನಸು ಕಾಣುತ್ತೇವೆ. ನಾನು ಮುಂದೆ ಡಾಕ್ಟರ್ ಆಗುತ್ತೇನೆ, ಸೈಂಟಿಸ್ಟ್ ಆಗುತ್ತೇನೆ, ಫಿಲ್ಮ್ ಸೇರುತ್ತೇನೆ ಹೀಗೆ ಹತ್ತು ಹಲವು. ಆದರೆ ಈ ಕನಸ್ಸಿನ ಬಗ್ಗೆ ನಮಗೆ ತಿಳಿದಿಲ್ಲ. ಆದರೆ ನೀವು ಮಲಗಿದ ಮೇಲೆ ಬೀಳುತ್ತದಲ್ಲಾ ಆ ಕನಸಿನ ಬಗ್ಗೆ ನಮಗೆ ಅಲ್ಪಸ್ವಲ್ಪ ತಿಳಿದಿದೆ. ಕೆಲವೊಬ್ಬರ ಕನಸಿನಲ್ಲಿ ಯಾರಾದರೂ ಸತ್ತು ಹೋದರೆ, ನಿಜಜೀವನದಲ್ಲಿ ಅವರಿಗೆ ಆಯಸ್ಸು ಹೆಚ್ಚು ಎನ್ನುತ್ತಾರೆ. ಹಾವು ಬಂದು ಕಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನಸು ಬೀಳುತ್ತದೆ. ಅದಕ್ಕೆ ಒಂದು ಅರ್ಥವೂ ಇದೆ ಎನ್ನುತ್ತಾರೆ. ಆದರೆ ಕನಸುಗಳ ಬಗ್ಗೆ ನಮಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳಿವೆ. ಅವೇನು ಎನ್ನುತ್ತೀರಾ.. ಮುಂದೆ ಓದಿ..

 • ಮಲಗಿದ ತಕ್ಷಣ ಕನಸು ಬೀಳುವುದಿಲ್ಲ: ಹೌದು ನಿದ್ದೆ ಹೋದ ತಕ್ಷಣ ನಿಮಗೆ ಕನಸು ಬೀಳುವುದಿಲ್ಲ. ಇದು ನಿಮ್ಮ ನಿದ್ದೆಯ ರ‍್ಯಾಪಿಡ್ ಐ ಮೂಮೆಂಟ್ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಅಂದಾಜು ನೀವು ನಿದ್ದೆ ಹೋದ ೯೦ರಿಂದ ೧೨೦ ನಿಮಿಷದ ಬಳಿಕ.
 • ದೀರ್ಘಾವಧಿ ಕನಸುಗಳು ಹಗಲಿನಲ್ಲಿ ಬೀಳುತ್ತವೆ: ಹೌದರು ಮಧ್ಯರಾತ್ರಿ ನಿಮಗೆ ಬಿದ್ದ ಕನಸುಗಳು ನೆನಪಿರುವುದಿಲ್ಲ. ಆದರೆ ಬೆಳಗಿನ ಜಾವ ಬೀಳುವ ಕನಸುಗಳು ನೆನಪಿರುತ್ತದೆ. ಮತ್ತು ದೀರ್ಘವಾಗಿರುತ್ತವೆ. ಬೆಳಗಿನ ಜಾವ ಬಿದ್ದ ಕನಸು ನಿಜ ಆಗುತ್ತದೆ ಎನ್ನುತ್ತಾರೆ.. ಅಲ್ಲವಾ?
 • ವೀಕೆಂಡ್ ಕನಸುಗಳಿಗೆ ವಾರೆಂಟಿ ಜಾಸ್ತಿ: ಹೌದು ಪ್ರತಿದಿನ ಬೀಳುವ ಕನಸುಗಳಿಗಿಂತ ವೀಕೆಂಡ್‌ನಲ್ಲಿ ಬೀಳುವ ಕನಸುಗಳು ಹೆಚ್ಚಾಗಿ ನೆನಪಿರುತ್ತದೆ. ಹಾಗೂ ಹೆಚ್ಚು ಕನಸುಗಳು ಬೀಳುತ್ತವೆ. ಅಲಾರಾಂ ಇಡದೇ ನಿಧಾನವಾಗಿ ಏಳುವ ಕಾರಣ ನಿಮ್ಮ ಮಿದುಳಿಗೆ ಯಾವುದೇ ಟೆನ್ಶನ್ ಇರುವುದಿಲ್ಲ. ಆದಕಾರಣ ಹೆಚ್ಚು ಕನಸುಗಳು ಬಿಳುತ್ತವೆ.
 • ಮಸಲ್‌ಗಳು ಪ್ಯಾರಾಲೈಸಡ್ ಸ್ಥಿತಿಯಲ್ಲಿರುತ್ತವೆ: ಹೌದು ನಿಮಗೆ ಬಂದ ಕನಸಿನಂತೆ ನೀವು ನಿಮ್ಮದೇಹ ಚಲಿಸಿದರೆ ಹೇಗಿರುತ್ತದೆ? ಉದಾಹರಣೆಗೆ ನಿಮ್ಮ ಕನಸಿನಲ್ಲಿ ನಾಯಿಯೊಂದು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದರೆ, ಅದನ್ನು ತಪ್ಪಿಸಲು ನೀವೂ ಓಡಿದರೆ.. ಅದಕ್ಕೆ ನಮ್ಮ ಮಸಲ್‌ಗಳು ಪ್ಯಾರಾಲೈಸಡ್ ಸ್ಥಿತಿಯಲ್ಲಿ ಇರುತ್ತವೆ.
 • ಚಿತ್ರಗಳೇ ಹೆಚ್ಚು: ಒಮ್ಮೆ ಕುಳಿತು ಆಲೋಚಿಸಿ. ನಿಮ್ಮ ಕನಸಿನಲ್ಲಿ ಏನಾಗುತ್ತಿದೆ ಎಂದು ನಿಮಗೆ ನೆನಪಿರುತ್ತದೆ ಆದರೆ ಏನು ಮಾತನಾಡಿದ್ದೆವು ಅಷ್ಟು ನೆನಪಿರುವುದಿಲ್ಲ. ಏಕೆಂದರೆ ಚಿತ್ರಗಳೂ, ವಿಡಿಯೋಗಳು ನಿಮ್ಮ ಕನಸಿನಲ್ಲಿ ಪ್ಲೇ ಆಗುತ್ತವೆ. ಆದರೆ ಅದರ ಆಡಿಯೋ ಮಿಸ್ ಆಗಿರುತ್ತದೆ. ಇರುವ ಸಂದರ್ಭಕ್ಕೆ ಹೊಂದಿಕೊಂಡಂತೆ ನೀವೇ ನಿಮ್ಮ ಮನಸಿನಲ್ಲಿಹೀಗಾಗುತ್ತಿರಬಹುದು ಎಂದು ಅಂದುಕೊಳ್ಳುತ್ತೀರಿ.
 • ಮಕ್ಕಳಲ್ಲಿ ಈ ಕನಸುಗಳು ಸಾಮಾನ್ಯ: ಮಕ್ಕಳ ಜಗತ್ತು ಚಿಕ್ಕದಾಗಿರುತ್ತದೆ. ಅವರಿಗೆ ಅವರದ್ದೇ ಚಿಂತೆ ಅವರಲ್ಲಿ ಪ್ರಾಣಿಗಳ ಜೊತೆ, ಕಾರ್ಟೂನಿನಲ್ಲಿರುವ ಕೆಟ್ಟ ಕ್ಯಾರೆಕ್ಟರ್‌ಗಳ ಜೊತೆ ಜಗಳವಾಡುವಂತೆ, ಹೊಡೆದಾಟ ಮಾಡುವಂತೆ, ಮೇಲಿಂದ ಕೆಳ ಬೀಳುವಂತೆ, ಯಾರಾದರೂ ಅಟ್ಟಿಸಿಕೊಂಡು ಬಂದಂತಹ ಕನಸುಗಳು ಬೀಳುತ್ತವೆ.
 • ಕಲರ್ ಕನಸು ಕಮ್ಮಿ: ಎಲ್ಲರಿಗೂ ಕನಸಿನಲ್ಲಿ ಎಲ್ಲ ಬಣ್ಣಗಳೂ ಕಾಣುವುದಿಲ್ಲ. ಜಗತ್ತಿನ ಶೇ.೧೨ರಷ್ಟು ಜನಕ್ಕೆ ಈಗಲೂ ಕನಸು ಕಪ್ಪು ಬಿಳುಪು ಮಾತ್ರ.
 • ವಿಚಿತ್ರ ಕನಸುಗಳು ಸಾಮಾನ್ಯ: ಇದು ಎಲ್ಲರಿಗೂ ಬೀಳುವ ಕನಸು. ಕುದುರೆಯೇರಿ ಯಾವುದೋ ಮನುಷ್ಯ ಬರುತ್ತಾನೆ. ಆದರೆ ಕುದರೆ ನಿಮ್ಮ ಮನೆಯೊಳಗೆ ಬಂದು ಸೋಫಾದ ಮೇಲೆ ಕೂರುತ್ತದೆ. ಮನುಷ್ಯ ನಿಮಗೆಲ್ಲರಿಗೂ ಅಡುಗೆ ಮನೆಯಲ್ಲಿ ತಿಂಡಿ ಮಾಡುತ್ತಾನೆ. ಈ ರೀತಿ ವಿಚಿತ್ರ ಎನಿಸುವ ಕನಸು ಬೀಳುವುದು ಸಾಮಾನ್ಯ.
 • ಇಂದು ನಿನ್ನೆಯ ಜೀವನ ರಾತ್ರಿಯ ಕನಸಾಗತ್ತದೆ: ಹೌದು ನಿಮ್ಮ ಮೆಮೊರಿಗಳನ್ನು ಬಳಸಿ ಕನಸುಗಳಾಗುತ್ತದೆ. ನೀವು ನಿಮ್ಮ ಇಷ್ಟದ ವ್ಯಕ್ತಿಯನ್ನು ನಿನ್ನೆ ಭೇಟಿ ಮಾಡಿ ಬಂದಿರುತ್ತೀರಿ. ಆದರೆ ಅದರ ಬಗ್ಗೆ ಮರುಯೋಚನೆ ಮಾಡಲು ಆಗಿರುವುದಿಲ್ಲ. ಆಗ ಅವರೇ ನಿಮ್ಮ ಕನಸಿಗೆ ಬಂದಂತೆ ಅನಿಸತ್ತದೆ.
 • ಗೊತ್ತಿರುವವರೇ ಕನಸಿಗೆ ಬರುತ್ತಾರೆ: ಹೌದು ನೀವು ನೋಡಿರುವ ಅಥವಾ ನಿಮಗೆ ಗೊತ್ತಿರುವ ಜನರೇ ನಿಮ್ಮ ಕನಸಿನಲ್ಲಿ ಬರುವವರು. ಇವರು ಸಿನಿಮಾ ತಾರೆಗಲೂ ಆಗಿರಬಹುದು.
  ನಿಮ್ಮ ಒತ್ತಡಕ್ಕೆ ತಕ್ಕಂತಹ ಕನಸು ಬೀಳುತ್ತದೆ: ನೀವು ಒತ್ತಡದಿಂದ ದೂರ ಇದ್ದರೆ ನಿಮಗೆ ಖುಷಿಯಾದ ಕನಸು ಬೀಳುತ್ತವೆ. ಅದೇ ಒತ್ತಡದಲ್ಲಿದ್ದರೆ ಕೆಟ್ಟ ಕನಸು ಬೀಳುತ್ತದೆ.
 • ಮಕ್ಕಳಲ್ಲಿ ಕೆಟ್ಟ ಕನಸು ಹೆಚ್ಚು: ಮಕ್ಕಳಲ್ಲಿ ಕೆಟ್ಟ ಕನಸು ಹೆಚ್ಚಾಗಿ ಬೀಳುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ರೀತಿ ಕನಸುಗಳು ಬೀಳುತ್ತವೆ.
 • ಕೆಟ್ಟ ಕನಸುಗಳಿಗೆ ಸಮಯವಿದೆ: ಪ್ರತಿದಿನ ಒಂದೇ ಸಮಯಕ್ಕೆ ಕೆಟ್ಟ ಕನಸುಗಳು ಬೀಳುತ್ತವೆ. ಯಾರೋ ನಿಮ್ಮನ್ನು ಕೊಲ್ಲಲು ಬಂದಹಾಗೆ, ನಿಮ್ಮನ್ನು ತೊಂದರೆಗೆ ಸಿಲುಕಿಸಿದ ಹಾಗೆ, ನೀರಿನಲ್ಲಿ ಮುಳುಗುವ ಹಾಗೆ ಇಂಥ ಕನಸುಗಳು.
 • ಕನಸುಗಳು ಎದ್ದ ನಂತರವೂ ತೊಂದರೆ ನೀಡಬಾರದು: ರಾತ್ರಿ ಬಿದ್ದ ಕನಸು ಬೆಳಗ್ಗೆ ನೆನಪಿರುತ್ತದೆ. ಆದರೆ ಆ ಕನಸಿನಿಂದ ನಿಮ್ಮ ಮಾನಸಿಕ ಆರೋಗ್ಯ ಹಾಳಾಗುವಂತಿರಬಾರದು. ಕನಸಿನಲ್ಲಿ ಯಾರೋ ನಿಮ್ಮನ್ನು ಫಾಲೋ ಮಾಡುತ್ತಿರುತ್ತಾರೆ. ನಿಜ ಜೀವನದಲೊಲೂ ಆ ವ್ಯಕ್ತಿ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸಬಾರದು.
 • ಸ್ಲೀಪ್ ಪ್ಯಾರಾಲಿಸಿಸ್: ಜಗತ್ತಿನ ಶೇ. ೮ರಷ್ಟು ಮಂದಿಗೆ ಸ್ಲೀಪ್ ಪ್ಯಾರಾಲಿಸಿಸ್ ಉಂಟಾಗುತ್ತದೆ. ಈ ರೀತಿ ಕನಸು ನಿಜ ಜೀವನಕ್ಕೆ ಹತ್ತಿರ ಎನಿಸುತ್ತದೆ. ನಿಮ್ಮ ಕೈಕಾಲು ಆಡಿಸಲು ಆಗುವುದಿಲ್ಲ. ನಿಮಗೆ ಯಾರೋ ಹೊಡೆಯಲು ಬರುತ್ತಿದ್ದಾರೆ. ಆದರೆ ನಿಮಗೆ ಅದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕೈ ಕಾಲು ಆಡುವುದಿಲ್ಲ. ಮಾತು ಬರುವುದಿಲ್ಲ. ಎಚ್ಚರವಾದರು ಕೆಲ ಕ್ಷಣ ಭಯ ಹಾಗೇ ಇರುತ್ತದೆ. ಅದು ಕನಸಲ್ಲ, ನಿಜ ಎನಿಸುತ್ತದೆ. ದೀರ್ಘಕಾಲ ನೆನಪಿರುತ್ತದೆ.
 • ನಿಮ್ಮ ಭಾವನೆಗಳ ಕನ್ನಡಿ ಕನಸು: ನೀವು ಯಾರನ್ನಾದರೂ ಇಷ್ಟಪಟ್ಟು ಹೇಳಲಾಗದಿದ್ದರೆ, ಕನಸಿನಲ್ಲಿ ಅದನ್ನು ಹೇಳಿಕೊಂಡಿರುತ್ತೀರಿ. ಯಾರಾದರೂ ಇಷ್ಟಪಟ್ಟವರನ್ನು ಕಳೆದುಕೊಂಡು ಅವರನ್ನು ಉಳಿಸಲು ಇನ್ನೂ ಪ್ರಯತ್ನ ಮಾಡಬಹುದಿತ್ತು ಎಂಬ ಪಶ್ಚಾತ್ತಾಪ ಇದ್ದರೆ ಅವರನ್ನು ನೀವೇ ಕೊಂದ ಹಾಗೆ ಹೀಗೆಲ್ಲ ಕನಸುಗಳು ಬೀಳುತ್ತವೆ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!