Monday, August 8, 2022

Latest Posts

ನಿಮ್ಮನೆಯ ಮಕ್ಕಳು ಯಾವಾಗಲೂ ಅಳುತ್ತಿರುತ್ತಾರಾ? ಹಾಗಿದ್ದರೆ ಮಕ್ಕಳಿಗೆ ಹೀಗೆ ಹೇಳುತ್ತಾ ಬನ್ನಿ…

ಮನೆಯಲ್ಲಿ ನಮ್ಮ ಮಕ್ಕಳು ಅಂಬೇಕಾಲಿನಲ್ಲಿ ನಡೆಯುವುದನ್ನು ನಿಲ್ಲಿಸಿ ತಾನೇ ಸ್ವಾವಲಂಭಿಯಾಗಿ ನಡೆಯಲು ಪ್ರಾರಂಭಿಸಿದಾಗ ಮತ್ತು ತೊದಲು ಭಾಷೆಯಲ್ಲಿ ಮಾತನಾಡಿದಾಗ ಕೇಳಲು ಎಷ್ಟು ಖುಷಿಯಾಗುತ್ತದೆ. ಆದರೆ ಇದೇ ಮಕ್ಕಳು ವಿನಾಕಾರಣ ಅಳುತ್ತಿದ್ದರೆ, ಹೇಳುವುದನ್ನು ಕೇಳದಿದ್ದರೆ ಮಕ್ಕಳನ್ನು ಸಂಬಾಳಿಸುವುದು ತುಂಬಾ ಕಷ್ಟವಾಗಿದೆ.

ಮಕ್ಕಳನ್ನು ಸುಧಾರಿಸುವುದಕ್ಕೆ ತಂದೆ ತಾಯಂದಿರು ಮಕ್ಕಳನ್ನು ಬೈದು, ಹೊಡೆಯಲು ಮುಂದಾಗುತ್ತಾರೆ ಆದರೆ ಇದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಖು ಹೆಚ್ಚಾಗಿರುವುದರಿಂದ ಮಕ್ಕಳನ್ನು ನಿಭಾಯಿಸುವಲ್ಲಿ ಈಗಿನ ಕಾಲದ ಪೋಷಕರು ಸ್ವಲ್ಪ ಜಾಗರೂಕರಾಗಿರಬೇಕು.

ಮಕ್ಕಳ ನೋವನ್ನು ಕಡಿಮೆ ಮಾಡಲು ಈ ಮಾತುಗಳನ್ನು ಹೇಳಿ ಇದರಿಂದ ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ.

ನಾವೆಲ್ಲರೂ ಒಂದೇ, ನಾನು ಸಹಾಯ ಮಾಡುತ್ತೇನೆ: ನಿಮ್ಮ ಮಕ್ಕಳು ಮಾಡುವ ಕೆಲಸಗಳಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಗೆ ಮಕ್ಕಳನ್ನು ದೂಷಿಸಬೇಡಿ, ಬದಲಿಗೆ ಅವರಿಗೆ ನೀವು ಸಹಾಯ ಮಾಡಿ.

ನಿನಗೆ ಇದು ಕಷ್ಟ ಅಂತ ನನಗೆ ಗೊತ್ತಿದೆ:  ಈ ಮಾತು ನಮ್ಮೆಲ್ಲರಿಗೂ ಅನ್ವಯವಾಗುತ್ತದೆ. ಆದರೆ ನಾವು ಮಕ್ಕಳು ಮಾಡುವ ಚಟುವಟಿಕೆಗಳು ಅವರಿಗೆ ಕಷ್ಟವೆನಿಸಿದರೆ ಅವರ ಬೆನ್ನೆಲುಬಾಗಿರಬೇಕು.

ನನಗೆ ಅರ್ಥವಾಗುತ್ತದೆ, ನಿನಗೆ ಬೇಸರವಾಗಿದೆ ಎಂದು: ನಮ್ಮ ಭಾವನೆಗಳೇ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ಇಂತಹ ಸಮಯದಲ್ಲಿ ಮಕ್ಕಳ ಮನಸನ್ನು ನಾವು ನೋವಿಸುವುದರ ಬದಲಿಗೆ ಅವರನ್ನು ಚಿಂತೆಯಿಂದ ಹೊರತರಲು ಸಹಾಯ ಮಾಡಿ.

ವಿರಾಮ ಪಡೆಯಲು ಬಿಡಿ:  ಮಕ್ಕಳಿಗೆ ನೀವು ನೀಡುವ ಟಾಸ್ಕ್ ಮುಗಿಸುವಷ್ಟರಲ್ಲಿ ಅವರಿಗೆ ಸಾಕಷ್ಟು ದಣಿದಿರಬಹುದು. ಹಾಗಾಗಿ ಮಕ್ಕಳಿಗೆ ಸ್ವಲ್ಪ ಚೇತರಿಸಿಕೊಳ್ಳಲು ಸಮಯ ನೀಡಿ.

ಐ ಲವ್ ಯು, ನಿನ್ನ ಜೊತೆ ನಾನಿರುವೆ ಹೆದರಬೇಡ: ಈ ಮಾತು ಮಕ್ಕಳು ಹಾಗೂ ನಿಮ್ಮ ನಡುವಿನ ಸಂಬಂಧ ಗಟ್ಟಿಗೊಳಿಸುತ್ತದೆ. ಆಗ ಮಕ್ಕಳಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಹಾಗೂ ನೀವು ಅವರ ಜೊತೆಗಿರುವ ಭರವಸೆ ಮೂಡಿಸಲು ಸಹಾಯವಾಗುತ್ತದೆ.

ಒಟ್ಟಾಗಿ ಪರಿಹಾರ ಹುಡುಕೋಣ: ನಾವು ನಮ್ಮ ಮಕ್ಕಳಿಗೆ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಬಯಸುತ್ತೇವೆ. ಅವರ ಭಾವನೆಗಳನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುವ ಪರಿಹಾರದೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಅವರಿಗೆ ಕಲಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss